ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ  Search similar articles
ಗಗನಕ್ಕೇರಿದ ಹತ್ತಿ ಬೆಲೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ದೇಶೀಯ ಹತ್ತಿ ಪೂರೈಕೆಯನ್ನು ವರ್ಧಿಸಲು ಹತ್ತಿ ರಫ್ತು ಇಳಿಮುಖಕ್ಕಾಗಿ ಸರಕಾರವು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆಯು ಶೇ.35ಕ್ಕಿಂತಲೂ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವಾರ ಕಚ್ಛಾಹತ್ತಿಯ ಆಮದು ಸುಂಕವನ್ನು ಕಡಿಮೆಗೊಳಿಸಿತ್ತು ಮತ್ತು ರಫ್ತು ಉತ್ತೇಜನವನ್ನು ಹಿಂತೆಗೆದುಕೊಂಡಿತ್ತು. ಹತ್ತಿ ಬೆಲೆ ಇಳಿಸಲು ಮತ್ತು ಪೂರೈಕೆಯನ್ನು ವೃದ್ಧಿಗೊಳಿಸಲು ಸರಕಾರವು ಈ ಕ್ರಮಕ್ಕೆ ಮುಂದಾಗಿತ್ತು.

ಬೆಲೆ ಇಳಿಸಲು ಮತ್ತು ಪೂರೈಕೆಯನ್ನು ಹೆಚ್ಚಿಸಲು ಪರಿಮಾಣ ನಿರ್ಬಂಧದ ಮೂಲಕ ರಫ್ತು ನಿಯಂತ್ರಣ ಹಾಗೂ ಹತ್ತಿ ರಫ್ತು ಮೇಲೆ ಸುಂಕ ವಿಧಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವತ್ತ ಸರಕಾರವು ಚಿಂತನೆ ನಡೆಸಲಿದೆ ಎಂದು ಜವಳಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ
ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಸಿಐಐ
ಟೀನಾ, ಉಷಾ ಶತಕೋಟ್ಯಾಧಿ'ಪತ್ನಿ'ಯರು
ಅನಿವಾಸಿ ಭಾರತೀಯರಿಗೆ ಎಲ್ಐಸಿ ಹೊಸ ಯೋಜನೆ
ಉದ್ಯಮ ಸ್ಪರ್ಧಾತ್ಮಕತೆ: ಭಾರತಕ್ಕೆ 41ನೇ ಸ್ಥಾನ