ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೀಘ್ರ ಸುಧಾರಣೆಯಾಗದು: ರೆಡ್ಡಿ  Search similar articles
ದೇಶದ ಹಣದುಬ್ಬರ ಸಮಸ್ಯೆಯು ಶೀಘ್ರದಲ್ಲೇ ಸುಧಾರಣೆ ಕಾಣುವ ಸಂಭವವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್ ವೈ.ವಿ.ರೆಡ್ಡಿ ಸಂಸತ್ ಸಮಿತಿಯಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಬ್ಯಾಂಕಿನ ಇತ್ತೀಚಿನ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯ ನಗದು ದ್ರವ್ಯತೆಯ ಪ್ರಮಾಣವನ್ನು ಕಡಿಮೆ ಮಾಡಿದ್ದು, ಹಣದುಬ್ಬರ ನಿಯಂತ್ರಣಕ್ಕಾಗಿ ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದು ರೆಡ್ಡಿ ಸಮಿತಿಯಲ್ಲಿ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಮತ್ತು ಬಡ್ಡಿದರಗಳನ್ನು ಹೆಚ್ಚುಗೊಳಿಸಿದ್ದು, ಜುಲೈ 29ಕ್ಕೆ ನಿಗದಿಯಾಗಿರುವ ನೀತಿ ವಿಮರ್ಷೆಯಲ್ಲಿ ಮತ್ತೆ ರೆಪೋ ದರ ಏರಿಸುವ ಸಂಭವವಿದೆ.

ಏನೇ ಆದರೂ, ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಪರಿಸ್ಥಿತಿಯು ಅತ್ಯಂತ ಕೆಟ್ಟದಾಗಿಲ್ಲ ಎಂಬುದಾಗಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಜೂನ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.11.89ಕ್ಕೆ ಏರಿಕೆ ಕಂಡಿದ್ದು, ಇದು 13 ವರ್ಷಗಳಲ್ಲಿ ಅಧಿಕ ಮಟ್ಟದ ಏರಿಕೆಯಾಗಿದೆ.
ಮತ್ತಷ್ಟು
ಪಾರೇಕ್ : ಸಮಯವಕಾಶ ವಿಸ್ತರಣೆಗೆ ಸು.ಕೋ ನಕಾರ
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ
ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಸಿಐಐ
ಟೀನಾ, ಉಷಾ ಶತಕೋಟ್ಯಾಧಿ'ಪತ್ನಿ'ಯರು