ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ  Search similar articles
ಜುಲೈ 22 ಲೋಕಸಭೆಯಲ್ಲಿನ ವಿಶ್ವಾಸಮತ ಯಾಚನೆಯ ನಂತರ, 3ಜಿ ಮೊಬೈಲ್ ಸೇವೆಗೆ ಸಲಹಾಸೂತ್ರ ಮತ್ತು ಅಂತಿಮ ನೀತಿಯನ್ನು ಘೋಷಿಸಲಾಗುವುದು ಎಂದು ಸರಕಾರವು ತಿಳಿಸಿದೆ.

ನೀತಿಯನ್ನು ಅಂತಿಮಗೊಳಿಸಲಾಗಿದ್ದು, 3ಜಿ ಸ್ಪೆಕ್ಟ್ರಂನ ಮೀಸಲು ಬೆಲೆಯನ್ನು ಹೆಚ್ಚುಗೊಳಿಸುವ ಟೆಲಿಕಾಂ ಇಲಾಖೆಯ ಬೇಡಿಕೆಗೂ ಟ್ರಾಯ್ ಒಪ್ಪಿಗೆ ಸೂಚಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಜುಲೈ 14ರಂದು ಶಿಫಾರಸ್ಸನ್ನು ಟ್ರಾಯ್ ಕಳುಹಿಸಿದ್ದು, 3ಜಿ ನೀತಿಯ ಕುರಿತಾಗಿ ಜುಲೈ 18ರಂದು ಟೆಲಿಕಾಂ ಆಯೋಗವು ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ, ಈ ನೀತಿಯನ್ನು ಸರಕಾರವು ವಿಶ್ವಾಸಮತದ ನಂತರವಷ್ಟೇ ಘೋಷಿಸಲಿದೆ ಎಂದು ಮೂಲಗಳು ಹೇಳಿವೆ.

3ಜಿ ಮೊಬೈಲ್ ಸೇವೆಯ ಸ್ಪೆಕ್ಟ್ರಂನ ಹರಾಜಿನಲ್ಲಿ ವಿದೇಶಿ ಸಂಸ್ಥೆಗಳು ಕೂಡಾ ಭಾಗವಹಿಸಬಹುದಾಗಿ ಟೆಲಿಕಾಂ ಇಲಾಖೆಯು ಈ ಮೊದಲು ತಿಳಿಸಿದ್ದು, ಅದರಲ್ಲಿ ಯಶಸ್ವಿಯಾದವರಿಗೆ 3ಜಿ ಸೇವೆ ನೀಡಲು ಪರವಾನಗಿಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

ಟೆಲಿಕಾಂ ಇಲಾಖೆಯ ಈ ನಿರ್ಧಾರವನ್ನು ಈ ಮೊದಲು ಟ್ರಾಯ್ ವಿರೋಧಿಸಿತ್ತು. ನಂತರ ಮರುಪರಿಶೀಲನೆ ನಡೆಸಿ ವಿದೇಶಿ ಸಂಸ್ಥೆಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅನುಮೋದನೆ ನೀಡಿತ್ತು.
ಮತ್ತಷ್ಟು
ಹಣದುಬ್ಬರ ಶೀಘ್ರದಲ್ಲೇ ಸುಧಾರಣೆಗೊಳ್ಳುವುದಿಲ್ಲ: ರೆಡ್ಡಿ
ಪಾರೇಕ್ : ಸಮಯವಕಾಶ ವಿಸ್ತರಣೆಗೆ ಸು.ಕೋ ನಕಾರ
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ
ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಸಿಐಐ