ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ  Search similar articles
ದೇಶದ ಪರಮಾಣು ಉತ್ಪಾದನಾ ಸಾಮರ್ಥ್ಯವನ್ನು 10,000 ಮೆಗಾವ್ಯಾಟ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ, 700 ಮೆ.ವ್ಯಾ. ಸಾಮರ್ಥ್ಯದ ಪರಮಾಣು ಸ್ಥಾವರವನ್ನು ಸ್ಥಾಪಿಸಲು ಯೋಜನೆಯನ್ನು ಸರಕಾರವು ಹೊಂದಿರುವುದಾಗಿ ಪರಮಾಣು ಇಂಧನ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ದೇಶವು 4,000 ಮೆ.ವ್ಯಾ, ಸಾಮರ್ಥ್ಯದ ಪರಮಾಣು ಇಂಧನ ಉತ್ಪಾದನೆಯನ್ನು ಹೊಂದಿದ್ದು, ಆದರೆ, ಇದರ ಪರಮಾಣು ರಿಯಾಕ್ಟರುಗಳು ಯುರೇನಿಯಂ ಕೊರತೆಯನ್ನು ಎದುರಿಸುತ್ತಿದೆ.

ನೂತನ ಗಣಿ ಮತ್ತು ಮಿನರಲ್ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೂಲಕ ಯುರೇನಿಯಂ ಶೋಧವನ್ನು ವೃದ್ಧಿಸುವತ್ತ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಿದ್ದು, ಇದರಿಂದ ದೇಶದ ಪರಮಾಣು ಇಂಧನ ಕೊರತೆಯನ್ನು ನೀಗಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೂತನ ಗಣಿಗಳು ಸಿದ್ಧಗೊಂಡಾಗ ಮತ್ತು ಯುರೇನಿಯಂ ಉತ್ಪಾದನಾ ಪ್ರಮಾಣವು ಹೆಚ್ಚಳಗೊಂಡಾಗ 700 ಮೆ.ವ್ಯಾ. ರಿಯಾಕ್ಟರುಗಳ ಎಂಟು ನೂತನ ಸ್ಥಾವರ ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದು, ಇದರ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿರ್ದೇಶಕ ಶ್ರೀಕುಮಾರ್ ಬ್ಯಾನರ್ಜಿ ತಿಳಿಸಿದ್ದಾರೆ.

ಸುಮಾರು 700 ಮೆ.ವ್ಯಾ. ಸಾಮರ್ಥ್ಯದ ಎಂಟು ರಿಯಾಕ್ಟರುಗಳು ಸುಮಾರು 5,600 ಮೆ.ವ್ಯಾ.ಸಾಮರ್ಥ್ಯವನ್ನು ಉಂಟುಮಾಡುವುದರೊಂದಿಗೆ, ಒಟ್ಟು ಪರಮಾಣು ಇಂಧನ ಉತ್ಪಾದನಾ ಸಾಮರ್ಥ್ಯವು 9,600 ಮೆ.ವ್ಯಾ.ಗಳಿಗೆ ತಲುಪಲಿದೆ ಎಂದು ಅವರು ಹೇಳಿದರು.
ಮತ್ತಷ್ಟು
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ
ಹಣದುಬ್ಬರ ಶೀಘ್ರ ಸುಧಾರಣೆಯಾಗದು: ರೆಡ್ಡಿ
ಪಾರೇಕ್ : ಸಮಯವಕಾಶ ವಿಸ್ತರಣೆಗೆ ಸು.ಕೋ ನಕಾರ
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ