ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಂಗ್‌ಕಾಂಗ್ ಉತ್ತಮ ವಿಮಾನನಿಲ್ದಾಣ: ಸಮೀಕ್ಷೆ  Search similar articles
ಪ್ರಯಾಣಿಕರ ವಾರ್ಷಿಕ ಸಮೀಕ್ಷೆಯಲ್ಲಿ ಹಾಂಗ್‌ಕಾಂಗ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಗತ್ತಿನ ಅತಿ ಉತ್ತಮ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬ್ರಿಟನ್ ಮೂಲದ ಕನ್ಸಲ್ಟನ್ಸಿ ಸ್ಕೈಟ್ರಾಕ್ಸ್ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ, ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸುಮಾರು 8.2 ಮಿಲಿಯನ್ ಮಂದಿಯ ಅಭಿಪ್ರಾಯವನ್ನು ಆಧರಿಸಿ, ಈ ಫಲಿತಾಂಶವನ್ನು ನೀಡಿದೆ.

ಸುಮಾರು 190 ವಿಮಾನ ನಿಲ್ದಾಣಗಳಲ್ಲಿನ, ಶಾಪಿಂಗ್, ಡೈನಿಂಗ್, ಸಿಬ್ಬಂದಿ ಸೌಜನ್ಯತೆ, ಲಗೇಜ್ ಸರಬರಾಜು ಮತ್ತು ಭದ್ರತಾ ವ್ಯವಸ್ಥೆ ಮುಂತಾದ ಅಂಶಗಳ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.

ಎಲ್ಲಾ ವಿಮಾನ ನಿಲ್ದಾಣಗಳು ಉತ್ತಮವಾಗಿದ್ದರೂ, ತನ್ನ ದಕ್ಷತೆ ಮತ್ತು ಸುರಕ್ಷತೆಯಿಂದಾಗಿ ಹಾಂಗ್‌ಕಾಂಗ್ ವಿಮಾನ ನಿಲ್ದಾಣವು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ಮತ್ತು ದಕ್ಷಿಣ ಕೊರಿಯಾದ ವಿಮಾನ ನಿಲ್ದಾಣವು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಸತತ ಏಳನೇ ಬಾರಿಗೆ ಹಾಂಗ್‌ಕಾಂಗ್ ಉತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮತ್ತಷ್ಟು
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ
ಹಣದುಬ್ಬರ ಶೀಘ್ರ ಸುಧಾರಣೆಯಾಗದು: ರೆಡ್ಡಿ
ಪಾರೇಕ್ : ಸಮಯವಕಾಶ ವಿಸ್ತರಣೆಗೆ ಸು.ಕೋ ನಕಾರ
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ