ಕಳೆದ ಹಲವು ತಿಂಗಳುಗಳಿಂದ ಕಚ್ಚಾ ತೈಲಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಮೂಡಿಸಿದ್ದ ಆತಂಕ ಕೊನೆಗೂ ಮಂಗಳವಾರ ನೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನಲ್ಲಿ 17 ವರ್ಷಗಳಲ್ಲಿ ಪ್ರಥಮ ಬಾರಿಗೆ ಅತ್ಯಧಿಕ ಇಳಿಕೆ ಕಂಡು ಬ್ಯಾರಲೊಂದರ 6.44 ಡಾಲರ್‌ಗೆ ಕುಸಿದಿದೆ.
ಮಂಗಳವಾರದಂದು ಕಚ್ಚಾ ತೈಲ ವಹಿವಾಟು ಬ್ಯಾರಲೊಂದರ 136.71ಡಾಲರ್‌ಗಳಿಗೆ ಮುಕ್ತಾಯವಾಗಿದ್ದು ಬುಧವಾರದಂದು ಬ್ಯಾರಲೊಂದರ 2.03 ಡಾಲರ್ ಮತ್ತೆ ಕುಸಿತ ಕಂಡುಬಂದಿತು. ಶುಕ್ರವಾರದಂದು ಬ್ಯಾರಲೊಂದರ 147ಡಾಲರ್‌ಗಳಿಗೆ ಏರಿಕೆಯಾಗಿದ್ದ ಕಚ್ಚಾ ತೈಲ ದರ ಸ್ವಲ್ಪಮಟ್ಟಿನ ಕುಸಿತದಿಂದಾಗಿ ನೆಮ್ಮದಿ ಮೂಡಿಸಿದೆ.
ಮಂಗಳವಾರ ವಹಿವಾಟಿನ ಅವಧಿಯ ವಹಿವಾಟಿನಲ್ಲಿ ತುಯ್ದಾಟ ಕಂಡುಬಂದು ಪ್ರತಿ ಬ್ಯಾರೆಲ್‌ಗೆ 138.74ಡಾಲರ್‌ಗೆ ತಲುಪಿ ಬ್ಯಾರಲೊಂದರ 6.44ಡಾಲರ್‌ಗೆ ಇಳಿಕೆಯಾಗಿತ್ತು. ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 146.73ರಿಂದ 135.92 ಡಾಲರ್‌ಗೆ ಇಳಿಕೆ ಕಂಡಿತು.
ಅಮೆರಿಕದ ಆರ್ಥಿಕತೆ ಹಾಗೂ ಭಾರತ ಮತ್ತು ಚೀನಾ ದೇಶಗಳಿಂದ ಹೆಚ್ಚಿನ ಬೇಡಿಕೆಯ ಉಹಾಪೋಹಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ತೊಳಲಾಟದಲ್ಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಲ್ಲಿ ಹೆಚ್ಚಿದ ತೈಲ ಸಂಗ್ರಹ ಹಾಗೂ ಬೇಡಿಕೆ ಕುಸಿತವಾಗಬಹುದೆನ್ನುವ ಆತಂಕ ಮೂಡಿದೆ.
ಅಮೆರಿಕದಲ್ಲಿ ಕಳೆದ ಒಂದು ವರ್ಷದಲ್ಲಿ ಕಚ್ಚಾ ತೈಲದ ಗ್ರಾಹಕರ ದರಗಳಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು, 1982ರಿಂದ ಇಲ್ಲಿಯವರೆಗೆ ಮೊದಲ ಬಾರಿಗೆ ಹೆಚ್ಚಿನ ಜಿಗಿತ ಕಂಡುಬಂದಿದೆ. ಈಗಾಗಲೇ ಇಂಧನದ ಬೇಡಿಕೆ ಶೇ 5ರಷ್ಟು ಕುಸಿತ ಕಂಡುಬಂದಿದ್ದು, ಬೇಡಿಕೆ ನಿರೀಕ್ಷಿತ ಮಟ್ಟಗಿಂತ ಹದಗೆಡುತ್ತಿದೆ ಎಂದು ಫೆಡರಲ್ ರಿಸರ್ವ್ ಮುಖ್ಯಸ್ಥ ಬೆನ್ ಬರ್ನಾನ್‌ಕೆ ಅಭಿಪ್ರಾಯಪಟ್ಟಿದ್ದಾರೆ.
|