ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಐ ಯೋಜನೆ:ಟೆಹರಾನ್‌ನಲ್ಲಿ ತ್ರೀ ದೇಶಗಳ ಸಭೆ  Search similar articles
ಭಾರತ-ಪಾಕಿಸ್ತಾನ-ಇರಾನ್ ದೇಶಗಳ ಮಹತ್ವಕಾಂಕ್ಷಿ 7.4ಬಿಲಿಯನ್ ಡಾಲರ್‌ಗಳ ವೆಚ್ಚದ ಅನಿಲ ಕೊಳವೆ ಯೋಜನೆ ಸಾಗಾಣಿಕೆ ಶುಲ್ಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದು ಯೋಜನೆ ಆರಂಭ ಕುರಿತಂತೆ ಮೂರು ದೇಶಗಳ ಅಧಿಕಾರಿಗಳು ಟೆಹರಾನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ವರ್ಷ ಪಾಕಿಸ್ತಾನದಲ್ಲಿ ಉಸ್ತುವಾರಿ ಸರಕಾರವಿದ್ದುದರಿಂದ ಬಹುದಿನಗಳ ಚರ್ಚೆಯನ್ನು ಮುಂದೂಡಲಾಗಿದ್ದು, ಅಮೆರಿಕದ ವಿರೋಧದ ನಡುವೆಯೂ ಇರಾನ್ -ಪಾಕಿಸ್ತಾನ-ಭಾರತದ ಅನಿಲ ಕೊಳವೆ ಯೋಜನೆ ಕುರಿತಂತೆ ತ್ರೀದೇಶಗಳ ಮಾತುಕತೆಯ ಸಭೆಯಲ್ಲಿ ಭಾರತ ಭಾಗವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಪೀಪಲ್ಸ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಭಾರತದ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೆವೊರ ಇಸ್ಲಾಮಾಬಾದ್‌ಗೆ ಭೇಟಿ ನೀಡಿ ಐಪಿಐ ಯೋಜನೆ ಹಾಗೂ ತುರ್ಕಮೆನಿಸ್ತಾನ್-ಅಫ್ಘಾನಿಸ್ಥಾನ-ಪಾಕಿಸ್ತಾನ-ಭಾರತ ಯೋಜನೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೆಹರಾನ್‌ನಲ್ಲಿ ನಡೆಯುವ ಸಭೆ ಮುಂದಿರುವಂತೆ ಪಾಕಿಸ್ತಾನದ ಸಂಚಾಲನಾ ಸಮಿತಿ, ಪಾಕಿಸ್ತಾನದಿಂದ ಭಾರತಕ್ಕೆ ಸಾಗಿಸುವ ಸಾಗಾಣಿಕೆ ಶುಲ್ಕವನ್ನು ಪರಿಶೀಲನೆ ನಡೆಸಲು ಜುಲೈ 17ರಂದು ಸಭೆಯನ್ನು ಕರೆದಿದೆ.

ಹಣಕಾಸು ಕಾರ್ಯದರ್ಶಿಫಾರೂಖ್ ಖಯ್ಯೂಮ್, ಫೆಡರಲ್‌ ಬೋರ್ಡ್ ಆಫ್ ರೆವಿನ್ಯೂ ಮುಖ್ಯಸ್ಥ ಅಬ್ದುಲ್ಲಾ ಯೂಸುಫ್, ಯೋಜನಾ ಆಯೋಗದ ಉಪಾಧ್ಯಕ್ಷ ಸಲ್ಮಾನ್ ಫಾರೂಖ್ ಮತ್ತು ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಸಂಚಾಲನಾ ಸಮಿತಿ ಕಳೆದ ಜನೆವರಿಯಲ್ಲಿ ಸಭೆ ಸೇರಿ ಐಪಿಐ ಯೋಜನೆಯಲ್ಲಿ ಇರಾನ್‌ನೊಂದಿಗೆ ಅನಿಲ ಮಾರಾಟ ಹಾಗೂ ಖರೀದಿ ಒಪ್ಪಂದ(ಜಿಎಸ್‌ಪಿಎ)ಕ್ಕೆ ಮಂಜೂರಾತಿ ನೀಡಲಾಗಿತ್ತು.

ಐಪಿಐ ಯೋಜನೆಯಲ್ಲಿ ಇರಾನ್‌ನೊಂದಿಗೆ ಅನಿಲ ಮಾರಾಟ ಹಾಗೂ ಖರೀದಿ ಒಪ್ಪಂದ(ಜಿಎಸ್‌ಪಿಎ)ಕ್ಕೆ ಮಂಜೂರಾತಿ ಹಾಗೂ ಐಪಿಐ ಯೋಜನೆಯಲ್ಲಿ ಹಣಹೂಡಿಕೆಯಿಂದ ಪಾಕಿಸ್ತಾನದ ಆರ್ಥಿಕತೆ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ಐಪಿಐ ಯೋಜನೆಯಿಂದ ಪಾಕಿಸ್ತಾನಕ್ಕೆ ವಾರ್ಷಿಕವಾಗಿ 2 ಬಿಲಿಯನ್ ಡಾಲರ್‌ ಲಾಭವಾಗಲಿದೆ.

ಇರಾನ್ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಟೆಹರಾನ್‌ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಪಾಕಿಸ್ತಾನಕ್ಕೆ ಅಹ್ವಾನ ನೀಡಿದ್ದು, ಸಭೆಯ ದಿನಾಂಕವನ್ನು ಜುಲೈ 17ರ ಸಂಚಾಲನೆ ಸಭೆಯ ನಂತರ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ತೈಲದರ:17 ವರ್ಷಗಳ ದಾಖಲೆ ಕುಸಿತ
ಹಾಂಗ್‌ಕಾಂಗ್ ಉತ್ತಮ ವಿಮಾನನಿಲ್ದಾಣ: ಸಮೀಕ್ಷೆ
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ
ಹಣದುಬ್ಬರ ಶೀಘ್ರ ಸುಧಾರಣೆಯಾಗದು: ರೆಡ್ಡಿ