ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟಕ್ಕೆ ಚಿಂತನೆ  Search similar articles
ದರಗಳನ್ನು ಇಳಿಮುಖವಾಗಿಸುವ ನಿಟ್ಟಿನಲ್ಲಿ ದರಗಳು ಏರಿಕೆಯಾಗಿರುವ ನಗರಗಳಲ್ಲಿ 6 ಮಿಲಿಯನ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು 60 ಲಕ್ಷ ಟನ್ ಗೋಧಿಯನ್ನು ತೆಗೆದಿರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಭಾರತ ಕೇಂದ್ರ ಕೃಷಿ ಸಮಿತಿ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.

ದೇಶದ ಕೆಲ ನಗರಗಳಲ್ಲಿ ಗೋಧಿಯ ದರದಲ್ಲಿ ಭಾರಿ ಏರಿಕೆಯಾಗಿದ್ದು, ಅಂತಹ ನಗರಗಳಲ್ಲಿ ಮಾತ್ರ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸಲು ಸರಕಾರ ನಾಳೆ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಪವಾರ್ ತಿಳಿಸಿದ್ದಾರೆ.

ಮೊದಲ ಆದ್ಯತೆಯಾಗಿ ಕೇಂದ್ರದಿಂದ ರಾಜ್ಯ ಸರಕಾರಗಳಿಗೆ ಗೋಧಿಯನ್ನು ಸರಬರಾಜು ಮಾಡಿ, ದರಗಳು ಏರಿಕೆಯಾಗಿರುವ ನಗರಗಳಲ್ಲಿ ಮುಕ್ತವಾಗಿ ಗೋಧಿಯನ್ನು ಮಾರಾಟ ಮಾಡುವಂತೆ ಸಲಹೆ ನೀಡಲಾಗುವುದು ಎಂದು ಪವಾರ್ ಹೇಳಿದ್ದಾರೆ.
ಮತ್ತಷ್ಟು
ದರ ಏರಿಕೆಯಲ್ಲಿ ನಿರಂತರ ಒತ್ತಡ-ಚಿದಂಬರಂ
ಹತ್ತಿ: ತೆರಿಗೆ ಕಡಿತದಿಂದ ದರ ಇಳಿಕೆ ಸಾಧ್ಯವಿಲ್ಲ
ಐಪಿಐ ಯೋಜನೆ:ಟೆಹರಾನ್‌ನಲ್ಲಿ ತ್ರೀ ದೇಶಗಳ ಸಭೆ
ತೈಲದರ:17 ವರ್ಷಗಳ ದಾಖಲೆ ಕುಸಿತ
ಹಾಂಗ್‌ಕಾಂಗ್ ಉತ್ತಮ ವಿಮಾನನಿಲ್ದಾಣ: ಸಮೀಕ್ಷೆ
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ