ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ  Search similar articles
ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪೆನಿಯಾದ ವಿಪ್ರೋ ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, 907.80ಕೋಟಿ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪೆನಿಯ ಕ್ರೋಢೀಕೃತ ಮೊತ್ತ 6,087.10 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷ 4,303.20ಕೋಟಿ ರೂ.ಗಳಾಗಿತ್ತು ಎಂದು ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ವಿಪ್ರೋ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್, ಕ್ವಾಂಟೆಕ್ ಗ್ಲೋಬಲ್ ಸರ್ವಿಸಸ್ , ವಿಪ್ರೋ ಹೆಲ್ತ್ ಕೇರ್ ಐಟಿ, ಎಂ ಪವರ್ ಸಾಫ್ಟವೇರ್ ಸರ್ವಿಸಸ್ ಇಂಡಿಯಾ, ಇಂಪ್ಯಾಕ್ಟ್ ಟೆಕ್ನಾಲಾಜಿ ಸರ್ವಿಸ್ ಮತ್ತು ಸಿ ಮ್ಯಾಂಗೊ ಇಂಡಿಯಾ ಎಪ್ರಿಲ್‌ 1 ರಂದು ವಿಲೀನವಾಗಿದ್ದು ಮೊದಲ ತ್ರೈಮಾಸಿಕದಲ್ಲಿ ಸೇರ್ಪಡೆಗೊಳಿಸಿಲ್ಲವೆಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೊದಲ ತ್ರೈಮಾಸಿಕದಲ್ಲಿ ಕಂಪೆನಿ 546ಕೋಟಿ ರೂ.ಗಳ ನಿವ್ವಳ ಲಾಭದತ್ತ ಸಾಗಿದ್ದು, ಕಳೆದ ವರ್ಷ 671.40 ಕೋಟಿ ರೂ.ಗಳ ಲಾಭವಾಗಿತ್ತು. ಕಂಪೆನಿಯ ಒಟ್ಟು ಆದಾಯ 4,807.4ಕೋಟಿ ರೂ.ಗಳಾಗಿದ್ದು ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 3,776.8 ಕೋಟಿ ರೂ.ಗಳ ಒಟ್ಟು ಆದಾಯವಾಗಿತ್ತು ಎಂದು ಕಂಪೆನಿ ತನ್ನ ತೈಮಾಸಿಕ ವರದಿಯಲ್ಲಿ ಪ್ರಕಟಿಸಿದೆ.

ಮಾಹಿತಿ ತಂತ್ರಜ್ಞಾನ ಸೇವೆಯಿಂದ ಮೊದಲ ತ್ರೈಮಾಸಿಕ ಅವಧಿಯಲ್ಲಿ 106.70ಕೋಟಿ ಡಾಲರ್ ಆದಾಯ ಗಳಿಸಲಾಗಿದೆ ಎಂದು ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ ತಿಳಿಸಿದ್ದಾರೆ.

ಪ್ರಸಕ್ತ ಅವಧಿಯಲ್ಲಿ 100 ಮಿಲಿಯನ್ ಡಾಲರ್ ಗ್ರಾಹಕರ ಪಟ್ಟಿಯಲ್ಲಿ 31 ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಸೆಪ್ಟೆಂಬರ್ ತೈಮಾಸಿಕದಲ್ಲಿ 1089 ಮಿಲಿಯನ್ ಡಾಲರ್‌ ಆದಾಯದ ಗುರಿಯನ್ನು ಹೊಂದಿದೆ ಎಂದು ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ.
ಮತ್ತಷ್ಟು
11.91%ಕ್ಕೆ ತಲುಪಿದ ಹಣದುಬ್ಬರ
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟಕ್ಕೆ ಚಿಂತನೆ
ದರ ಏರಿಕೆಯಲ್ಲಿ ನಿರಂತರ ಒತ್ತಡ-ಚಿದಂಬರಂ
ಹತ್ತಿ: ತೆರಿಗೆ ಕಡಿತದಿಂದ ದರ ಇಳಿಕೆ ಸಾಧ್ಯವಿಲ್ಲ
ಐಪಿಐ ಯೋಜನೆ:ಟೆಹರಾನ್‌ನಲ್ಲಿ ತ್ರೀ ದೇಶಗಳ ಸಭೆ
ತೈಲದರ: 17 ವರ್ಷಗಳ ದಾಖಲೆ ಕುಸಿತ