ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ  Search similar articles
ಜುಲೈ 5ರ ವಾರಾಂತ್ಯಕ್ಕೆ ಹಣದುಬ್ಬರ ಕೇವಲ ಶೇ 0.02ರಷ್ಟು ಏರಿಕೆಯಾಗಿದ್ದು,ದರ ಏರಿಕೆ ವಾರದಿಂದ-ವಾರಕ್ಕೆ ಇಳಿಕೆಯಾಗುತ್ತಿವೆ ಅಥವಾ ನಿಯಂತ್ರಣದಲ್ಲಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಜುಲೈ 5ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ11.91 ಏರಿಕೆಯಾಗಿದ್ದು ಕಳೆದ ವಾರದ ಹಣದುಬ್ಬರ 11.89 ವರದಿಯಾಗಿತ್ತು. ಹಣದುಬ್ಬರ ವಾರದಿಂದ ವಾರಕ್ಕೆ ನಿಯಂತ್ರಣವಾಗುತ್ತಿದೆ ಎಂದು ಹಣದುಬ್ಬರದ ವಿವರಗಳನ್ನು ಸಚಿವ ಚಿದಂಬರಂ ಬಿಡುಗಡೆ ಮಾಡಿದರು.

ಜುಲೈ 5ಕ್ಕೆ ವಾರಂತ್ಯಗೊಂಡಂತೆ ವಾರ್ಷಿಕ ಹಣದುಬ್ಬರ ದರ 30 ಅಗತ್ಯ ದಿನಸಿ ವಸ್ತುಗಳ ದರಗಳಲ್ಲಿ ಶೇ 5.74ರಷ್ಟು ಇಳಿಕೆಯಾಗಿದೆ ಎಂದು ಸಚಿವ ಚಿದಂಬರಂ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳಾದ ದವಸಧಾನ್ಯ, ಅಡುಗೆ ಏಣ್ಣೆ, ತರಕಾರಿ ,ಹಾಲು ಉತ್ಪನ್ನಗಳು, ಸೀಮೆ ಎಣ್ಣೆ, ಸಾಬುನು ಸೇರಿದಂತೆ ಇನ್ನಿತರ ವಸ್ತುಗಳ ದರಗಳು ಹೆಚ್ಚುಕಡಿಮೆ ನಿಯಂತ್ರಣದಲ್ಲಿವೆ ಎಂದು ಸಚಿವ ಚಿದಂಬಂರಂ ಹೇಳಿದ್ದಾರೆ.
ಮತ್ತಷ್ಟು
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ
ಸತ್ಯಂ: ಮೊದಲ ತ್ರೈಮಾಸಿಕದಲ್ಲಿ ಶೇ.48 ಲಾಭ ಹೆಚ್ಚಳ
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ
11.91%ಕ್ಕೆ ತಲುಪಿದ ಹಣದುಬ್ಬರ
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟಕ್ಕೆ ಚಿಂತನೆ
ದರ ಏರಿಕೆಯಲ್ಲಿ ನಿರಂತರ ಒತ್ತಡ-ಚಿದಂಬರಂ