ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ  Search similar articles
ಡೀಸೆಲ್, ಇಂಧನ ತೈಲ ಸೇರಿದಂತೆ ಅನೇಕ ಉತ್ಪನ್ನಗಳನ್ನು ನೆರೆಯ ದೇಶ ಭಾರತದಿಂದ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಪಾಕಿಸ್ತಾನವು ಇನ್ನಷ್ಟು ವೃದ್ಧಿಸಿದಂತಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ವ್ಯಾಪಾರ ಕೊರತೆಯನ್ನು ಕಡಿಮೆಗೊಳಿಸಲು ಮತ್ತು ದೂರದ ದೇಶಗಳಿಂದ ಆಮದಿನ ಮೇಲಿನ ಸಾಗಾಣಿಕ ವೆಚ್ಚವನ್ನು ಕಡಿತಗೊಳಿಸಲು ಪಾಕಿಸ್ತಾನವು ಈ ನಿರ್ಧಾರವನ್ನು ಕೈಗೊಂಡಿದೆ.

ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಪಾಕಿಸ್ತಾನವು ಹಂತಹಂತವಾಗಿ ವೃದ್ಧಿಸಲಿದೆ ಎಂದು ಪಾಕಿಸ್ತಾನದ ಕಾರ್ಯತಃ ವಾಣಿಜ್ಯ ಸಚಿವ ಅಹ್ಮದ್ ಮುಕ್ತಾರ್ ನೂತನ ವ್ಯಾಪಾರ ನೀತಿ ಘೋಷಣೆಯ ವೇಳೆ ತಿಳಿಸಿದ್ದಾರೆ.

ಭಾರತದಿಂದ ಆಮದು ಮಾಡುವ ಉತ್ಪನ್ನಗಳಲ್ಲಿ ಡೀಸೆಲ್, ಇಂಧನ ತೈಲ ಮತ್ತು ಇತರ ಅನೇಕ ಉತ್ಪನ್ನಗಳನ್ನು ಸೇರಿಸಿದೆ ಎಂದು ಅಕ್ತರ್ ತಿಳಿಸಿದ್ದಾರೆ.

ಸಾಗಾಣಿಕೆ ವೆಚ್ಚದ ಕಾರಣದಿಂದಾಗಿ ಭಾರತದಿಂದ ಆಮದು ಮಾಡಿಕೊಳ್ಳುವುದು ಅತ್ಯಂತ ಸುಲಭವಾಗಿದ್ದು, ಇದು ದೇಶದ ಜಾಗತಿಕ ವ್ಯಾಪಾರ ಕೊರತೆ ಸಮಸ್ಯೆಯನ್ನು ಎದುರಿಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಮತ್ತಷ್ಟು
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ
ಸತ್ಯಂ: ಮೊದಲ ತ್ರೈಮಾಸಿಕದಲ್ಲಿ ಶೇ.48 ಲಾಭ ಹೆಚ್ಚಳ
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ
11.91%ಕ್ಕೆ ತಲುಪಿದ ಹಣದುಬ್ಬರ