ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ  Search similar articles
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮತಿಯನ್ನು ಪಡೆಯಲು ಬಹು ಸಮಯದವರೆಗೆ ನಿರೀಕ್ಷಿಸಬೇಕಿದ್ದ ವ್ಯವಸ್ಥೆಯನ್ನು ತೆಗೆದುಹಾಕಿ ಕೇವಲ 30 ನಿಮಿಷದಲ್ಲಿ ಅನುಮತಿ ದೊರೆಯುವಂತೆ ಮಾಡಲಾಗುವುದು ಎಂದು ನಿಲ್ದಾಣದ ಮುಖ್ಯ ಕಾರ್ಯನಿರ್ವಾಹಕ ಆಂಡ್ರೂ ಹ್ಯಾರಿಸನ್ ಹೇಳಿದ್ದಾರೆ.

ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕ ಭದ್ರತಾ ಪರೀಕ್ಷೆಯ ಕೌಂಟರ್‌ವರೆಗೆ ತಲುಪಲು ಕೇವಲ 30 ನಿಮಿಷ ತೆಗೆದುಕೊಳ್ಳುವಂತೆ ಪರೀಕ್ಷಣಾ ವ್ಯವಸ್ಥೆಯನ್ನು ಸುಲಭಗೊಳಿಸಿ ಕಡಿಮೆ ಅವಧಿಯನ್ನು ತೆಗೆದುಕೊಳ್ಳುವಂತೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಹ್ಯಾರಿಸನ್ ಹೇಳಿದ್ದಾರೆ.

ಡೈಲ್ (ದೆಹಲಿ ಇಂದಿರಾಗಾಂಧಿ ಎರ್‌ಪೋರ್ಟ್ ಅಥಾರಿಟಿ ) ತೆಗೆದುಕೊಂಡ ಆಧುನೀಕರಣದ ಕಾರ್ಯವನ್ನು ವಿವರಿಸಿ, ನಿರ್ಗಮನದ ಪ್ರಯಾಣಿಕರ ತಪಾಸಣೆಗಾಗಿ ಸ್ಥಳವನ್ನು ವಿಸ್ತಾರಗೊಳಿಸಲಾಗುವುದಲ್ಲದೇ ಕೌಂಟರ್‌ಗಳನ್ನು ಹೆಚ್ಚಿಸಿ ತ್ರೀ ಇನ್ ಲೈನ್ ಕ್ಲೀಯರಿಂಗ್ ವ್ಯವಸ್ಥೆಯನ್ನು ಅಳಡಿಸಲಾಗುತ್ತಿದೆ ಎಂದು ಹ್ಯಾರಿಸನ್ ವಿವರಣೆ ನೀಡಿದ್ದಾರೆ

ಏರ್‌ಪೋರ್ಟ್ ಅಥಾರಿಟಿ ಆಪ್ ಇಂಡಿಯಾ ಹಾಗೂ ಡೈಲ್ ಜಂಟಿಯಾಗಿ ಅಧ್ಯಯನ ನಡೆಸಿದ್ದು, ಪ್ರಸಕ್ತ ಪ್ರಯಾಣಿಕರು ವಲಸೆ ಪತ್ರ ಸೇರಿದಂತೆ ಕೇವಲ 14 ನಿಮಿಷಗಳಲ್ಲಿ ಎಲ್ಲ ರೀತಿಯ ಭದ್ರತಾ ಪರೀಕ್ಷಣೆಗೆ ಒಳಪಡಲಿದ್ದಾರೆ ಎಂದು ಹೇಳಿದ್ದಾರೆ
ಮತ್ತಷ್ಟು
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ
ಸತ್ಯಂ: ಮೊದಲ ತ್ರೈಮಾಸಿಕದಲ್ಲಿ ಶೇ.48 ಲಾಭ ಹೆಚ್ಚಳ
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ