ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ  Search similar articles
ರಿಲಯನ್ಸ್ ಕಮ್ಯೂನಿಕೇಶನ್‌ನೊಂದಿಗೆ ಒಪ್ಪಂದದ ಸಾಧ್ಯತೆಗಳಿಲ್ಲವಾದ್ದರಿಂದ ಮಾತುಕತೆಗಳನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಪ್ರಮುಖ ಮೊಬೈಲ್ ಫೋನ್ ಸಂಸ್ಥೆಯಾದ ಎಂಟಿಎನ್ ಗ್ರುಪ್ ಹೇಳಿಕೆ ನೀಡಿದೆ.

ಎಂಟಿಎನ್ ಹಾಗೂ ರಿಲಯನ್ಸ್ ಕಮ್ಯೂನಿಕೇಶನ್ ಕಂಪೆನಿಗಳು ಮೇ 26 ರಂದು ಮಾತುಕತೆಗಳು ಆರಂಭಿಸಿದ್ದು, ಜುಲೈ 21ರ ವರೆಗೆ ಗಡುವನ್ನು ವಿಸ್ತರಿಸಲಾಗಿತ್ತು.ಉಭಯ ಕಂಪೆನಿಗಳು ನಿಯಂತ್ರಣ ಸಮಸ್ಯೆ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಹಿನ್ನೆಲೆಯಲ್ಲಿ ಒಪ್ಪಂದದ ಮಾತುಕತೆಗಳನ್ನು ರದ್ದುಗೊಳಿಸಲಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ ವಕ್ತಾರರು ತಿಳಿಸಿದ್ದಾರೆ.

ಜುಲೈ 8ಕ್ಕೆ ನೀಡಿದ ಗಡುವಿನ ಸಂದರ್ಭದಲ್ಲಿ ರಿಲಯನ್ಸ್‌ನ ಭಾರತದಲ್ಲಿರುವ ಕಂಪೆನಿಗಳಲ್ಲಿರುವ ಶೇರುಗಳು ಅಕಸ್ಮಿಕವಾಗಿ ಕುಸಿತಗೊಂಡ ಹಿನ್ನೆಲೆಯಲ್ಲಿ ಸಹೋದರರಾದ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಅವರ ಮಧ್ಯೆ ವಿವಾದ ಉಲ್ಬಣಿಸಿತ್ತು.

ಉಭಯ ಕಂಪೆನಿಗಳು ಮಾತುಕತೆ ನಡೆಸುತ್ತಿರುವ ಸಂಧರ್ಭದಲ್ಲಿ ಮಾರುಕಟ್ಟೆಯಲ್ಲಿ ಎಂಟಿಎನ್ 38 ಬಿಲಿಯನ್ ಬೆಲೆ ಬಾಳುತ್ತಿದ್ದರೇ ರಿಲಯನ್ಸ್ ಕಮ್ಯೂನಿಕೇಶನ್ 28 ಬಿಲಿಯನ್ ಡಾಲರ್‌ಗಳಾಗಿತ್ತು
ಮತ್ತಷ್ಟು
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ