ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ  Search similar articles
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಹೆಚ್ಚಿದ ಹಣದುಬ್ಬರದಿಂದಾಗಿ ಜನಸಾಮಾನ್ಯರಿಗೆ ತೀವ್ರತೆರನಾದ ತೊಂದರೆ ಎದುರಾಗಿದೆ, ಕಳೆದ ಮೂರು ತಿಂಗಳಲ್ಲಿ ಶೇ 46ರಷ್ಟು ಪೆಟ್ರೋಲ್ ದರದಲ್ಲಿ ಏರಿಕೆಯಾಗಿ ಅಹಾರ ಧಾನ್ಯಗಳ ದರಗಳಲ್ಲಿ ಶೇ 30-50ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣದುಬ್ಬರದಿಂದ ಕಂಗಾಲಾದ ಬಡಜನತೆ ಆತ್ಮಹತ್ಯೆಗೆ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಂತನ ನೀಡಲು ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲಿಯಂ, ಚಿನ್ನದ ದರ ಏರಿಕೆಯಿಂದಾಗಿ ದೇಶದ ಆರ್ಥಿಕತೆ ಕುಸಿತ ಕಂಡಿದ್ದು ಹಣದುಬ್ಬರ ದರ ಪಾಕಿಸ್ತಾನದಲ್ಲಿ ಶೇ 19ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ಗ್ರಾಹಕರ ಸೂಚ್ಯಂಕ ಶೇ21.5ರಷ್ಟಿದ್ದು, ಪೆಟ್ರೋಲೀಯಂ ಹಾಗೂ ಅಗತ್ಯ ದಿನಸಿ ವಸ್ತುಗಳ ದರ ಏರಿಕೆ ಹಾಗೂ ಭತ್ತದ ದರ ಏರಿಕೆಯಿಂದ ಜನತೆಗೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

2007ರ ಡಿಸೆಂಬರ್ ತಿಂಗಳಿನಲ್ಲಿ ಒಂದು ಕೆ.ಜಿ. ಅಕ್ಕಿಯ ಬೆಲೆ 55ರೂ.ಗಳಾಗಿದ್ದು, ಪ್ರಸಕ್ತ ಪ್ರತಿ ಕೆ.ಜಿ.ಗೆ 120ರೂ.ಗಳಿಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಮತ್ತಷ್ಟು
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ