ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ  Search similar articles
ಇರಾನ್ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ಮನದಟ್ಟು ಮಾಡಲು ಜಿನೇವಾದಲ್ಲಿ ನಡೆದ ವಾರಾಂತ್ಯದ ಮಾತುಕತೆ ವಿಫಲವಾಗಿದ್ದರಿಂದ ಏಷ್ಯಾದ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಏರಿಕೆ ಉಂಟಾಗಿದೆ ಎಂದು ತೈಲ ವ್ಯಾಪಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್‌ನ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಅಗಸ್ಟ್‌ ತಿಂಗಳ ಸರಬರಾಜಿನಲ್ಲಿ 82 ಸೆಂಟ್‌ಗಳ ಏರಿಕೆ ಕಂಡುಬಂದಿದ್ದು, ಪ್ರತಿ ಬ್ಯಾರೆಲ್‌ಗೆ 129.70 ಡಾಲರ್‌ಗಳ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ಜಿನೇವಾದಲ್ಲಿ ಶನಿವಾರದಂದು ನಡೆದ ಮಾತುಕತೆಗಳು ವಿಫಲವಾಗಿದ್ದರಿಂದ, ತೈಲ ಸಂಪನ್ಮೂಲಭರಿತ ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಕೀಯ ಬೆಳವಣಿಗೆಗಳ ಮೇಲೆ ಹೂಡಿಕೆದಾರರು ನಿಗಾವಹಿಸಿದ್ದಾರೆ ಎನ್ನಲಾಗಿದೆ.

ಜಿನೇವಾದಲ್ಲಿ ನಡೆದ ಸಭೆ ಪೂರಕವಾಗಿದ್ದರೂ ಇಲ್ಲಿಯವರೆಗೆ ಇರಾನ್‌ನಿಂದ ಯಾವುದೇ ಸಕಾರಾತ್ಮಕ ಉತ್ತರ ದೊರೆತಿಲ್ಲ ಎಂದು ಯುರೋಪ್ ವಿದೇಶಾಂಗ ನೀತಿಯ ಮುಖ್ಯಸ್ಥ ಝೇವೈರ್ ಸೊಲಾನಾ ಸಭೆಯ ಮುಕ್ತಾಯದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜಿನೇವಾದಲ್ಲಿ ನಡೆದ ಸಂಧಾನ ಮಾತುಕತೆಗಳಿಗೆ ಉತ್ತರ ನೀಡಲು ಎರಡು ವಾರಗಳ ಕಾಲ ಅವಕಾಶ ನೀಡುವಂತೆ ಇರಾನ್ ಮನವಿ ಮಾಡಿದ್ದರಿಂದ ಮಾತುಕತೆಗಳು ನಿರ್ದಿಷ್ಟ ಪಥದತ್ತ ಸಾಗುತ್ತಿದ್ದರೂ ನಿಧನಗತಿಯನ್ನು ಹೊಂದಿದ್ದರಿಂದ ತಕ್ಕ ಫಲಿತಾಂಶ ಹೊರಹೊಮ್ಮುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಧಾನ ಮಾತುಕತೆಗಳು ವಿಫಲವಾದಲ್ಲಿ ಇರಾನ್ ವಿರುದ್ಧ ನಿರ್ಬಂಧನೆಗಳನ್ನು ಹೇರುವುದಾಗಿ ಅಮೆರಿಕ ಈಗಾಗಲೇ ಸ್ಪಷ್ಟಪಡಿಸಿದ್ದು, ತಾವು ಹೆಚ್ಚಿನ ವಿವರಣೆಗಳನ್ನು ನೀಡಲು ಬಯಸುವುದಿಲ್ಲ ಎಂದು ಝವೈರಾ ಹೇಳಿದ್ದಾರೆ.

ಸಂಧಾನದ ಬಗ್ಗೆ ಇರಾನ್ ಜನತೆಗೆ ಮನವರಿಕೆಯಾಗಿದೆ. ಇರಾನ್ ಸಹಕಾರ ನೀಡುವುದರಿಂದ ಎಲ್ಲ ದೇಶಗಳಿಗೆ ಲಾಭವಾಗಲಿರುವುದರಿಂದ ಮುಂದೆ ಎದುರಾಗುವ ನಿರ್ಬಂಧನೆಗಳನ್ನು ತಡೆಯಬಹುದಾಗಿದೆ ಎಂದು ಅಮೆರಿಕದ ವಕ್ತಾರ ಸೀನ್ ಮ್ಯಾಕ್‌ ಕೊಮಾರ್ಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ