ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್  Search similar articles
ರಾಷ್ಟ್ರದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ವೆಚ್ಚವನ್ನು ನಿರ್ಬಂಧಿಸಿ ಹಾನಿಯನ್ನು ತಡೆಗೆಟ್ಟಲು ವಿಮಾನ ಹಾರಾಟಗಳನ್ನು ಕಡಿತಗೊಳಿಸುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಏರ್ ಇಂಡಿಯಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದ್ದು, ಹಾನಿಯನ್ನು ಎದುರಿಸುತ್ತಿರುವ ಮಾರ್ಗಗಳ ವಿಮಾನ ಹಾರಾಟವನ್ನು ರದ್ದುಗೊಳಿಸಿ ವೆಚ್ಚವನ್ನು ಇಳಿಸುವುದು ಅಗತ್ಯವಾಗಿದೆ ಎಂದು ಸುದ್ದಿಗಾರರಿಗೆ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ಹಾನಿಯನ್ನು ಎದುರಿಸುತ್ತಿರುವ ಮಾರ್ಗಗಳ ವಿಮಾನಯಾನವನ್ನು ರದ್ದುಗೊಳಿಸಲು ಎಲ್ಲ ವೈಮಾನಿಕ ಸಂಸ್ಥೆಗಳು ನಿರ್ಧರಿಸಿದ್ದು, ಅದರಂತೆ ಏರ್ ಇಂಡಿಯಾ ಕೂಡಾ ವಿಮಾನ ಹಾರಾಟವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಆದರೆ ವಿಮಾನಯಾನ ಸಚಿವಾಲಯದಿಂದ ಇಲ್ಲಿಯವರೆಗೆ ಯಾವುದೇ ನಿರ್ದೇಶನ ಬಂದಿಲ್ಲವೆಂದು ಪಟೇಲ್ ಹೇಳಿದ್ದಾರೆ.

ದೇಶದ ವೈಮಾನಿಕ ಉದ್ಯಮದಲ್ಲಿ ಬೇಲ್ ಔಟ್ ಪ್ಯಾಕೆಜ್‌ ಸಮಸ್ಯೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಪಟೇಲ್ ವೈಮಾನಿಕ ಸಂಸ್ಥೆಗಳಿಗೆ ಯಾವುದೇ ಅನುದಾನ ಅಥವಾ ಹಣವನ್ನು ಸರಕಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವೈಮಾನಿಕ ಸಂಸ್ಥೆಗಳಿಗೆ ಯಾವುದೇ ಅನುದಾನ ಅಥವಾ ಹಣವನ್ನು ಸರಕಾರ ನೀಡುವುದಿಲ್ಲ. ವೈಮಾನಿಕ ಸಂಸ್ಥೆಗಳು ತಮ್ಮ ಆದಾಯದಿಂದ ಮಾತ್ರ ವೆಚ್ಚವನ್ನು ಭರಿಸಬಹುದಾಗಿದೆ. ಆದರೆ ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾರ್ಗಗಳನ್ನು ವೈಮಾನಿಕ ಸಂಸ್ಥೆಗಳು ಕಡಿತಗೊಳಿಸುತ್ತವೆ ಎಂದು ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಮತ್ತಷ್ಟು
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ