ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ  Search similar articles
ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಇಂಡಿಯನ್ ಬ್ಯಾಂಕ್, ಜೂನ್ 2008ಕ್ಕೆ ಅಂತ್ಯಗೊಂಡ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು 436.63 ಕೋಟಿ ರೂ.ಗಳ ದಾಖಲೆಯ ಲಾಭ ಗಳಿಸಿ ಶೇ 32.42 ಏರಿಕೆ ಕಂಡಿದೆ. ಕಳೆದ ವರ್ಷ ಬ್ಯಾಂಕ್ 329.73 ಕೋಟಿ ರೂ.ಗಳ ಲಾಭ ಗಳಿಸಿತ್ತು.

ಬ್ಯಾಂಕ್‌ನ ಸಾಧನೆಯ ಪ್ರಮುಖ ಅಂಶಗಳನ್ನು ಸುದ್ದಿಗಾರರಿಗೆ ತಿಳಿಸಿದ ಬ್ಯಾಂಕ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಸುಂದರ್‌ ರಾಜನ್, ಜೂನ್ 2008ರ ಅಂತ್ಯದ ವೇಳೆಗೆ 217.62ಕೋಟಿ ರೂ.ಗಳ ನಿವ್ವಳ ಲಾಭಗಳಿಸಿ ಶೇ 2.64ರಷ್ಟು ಏರಿಕೆ ಕಂಡಿದ್ದು, ಕಳೆದ ವರ್ಷ 212.03ಕೋಟಿ ರೂ.ಗಳ ಲಾಭಗಳಿಸಿತ್ತು ಎಂದು ಹೇಳಿದ್ದಾರೆ.

ಬ್ಯಾಂಕ್‌ನ ಬಡ್ಡಿ ಮೂಲದ ಆದಾಯ ಶೇ 25.65 (306.58ಕೋಟಿ ರೂ.) ಉತ್ತಮವಾಗಿದ್ದು, 1,195.20 ರಿಂದ 1,501.78 ಕೋಟಿ ರೂ.ಗಳಿಗೇರಿದೆ. ಒಟ್ಟು ಆದಾಯದಲ್ಲಿ ಕೂಡಾ ಶೇ 26.75ರಷ್ಟು ಹೆಚ್ಚಳವಾಗಿ 1,376.74 ಕೋಟಿ ರೂ.ಗಳಿಂದ 1,744.99 ಕೋಟಿ ರೂ.ಗಳಾಗಿವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಬ್ಯಾಂಕ್‌ನ ವಹಿವಾಟಿನಲ್ಲಿ ಶೇ 32.80 ರಷ್ಟು ಹೆಚ್ಚಳವಾಗಿದ್ದು, 80,341 ಕೋಟಿ ರೂ.ಗಳಿಂದ 1,06,691 ಕೋಟಿ ರೂ.ಗಳಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಠೇವಣಿ ಖಾತೆಗಳಲ್ಲಿ ಶೇ 24.90ರಷ್ಟು ಹೆಚ್ಚಳವಾಗಿದ್ದು, 49,812 ಕೋಟಿ ರೂ.ಗಳಿಂದ 62,215 ಕೋಟಿ ರೂ.ಗಳಾಗಿವೆ. ಬ್ಯಾಂಕ್‌ನ ಒಟ್ಟಾರೆ ಪ್ರಗತಿ ಶೇ 45.68ರಷ್ಟು ಹೆಚ್ಚಳವಾಗಿದ್ದು, 30,529ಕೋಟಿ ರೂ.ಗಳಿಂದ 44,476 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಸುಂದರ್‌ ರಾಜನ್ ವಿವರಣೆ ನೀಡಿದ್ದಾರೆ.
ಮತ್ತಷ್ಟು
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ