ಜರ್ಮನಿಯ ಅತ್ಯಾಧುನಿಕ ಕಾರು ಉತ್ಪಾದಕ ಸಂಸ್ಥೆಯಾದ ಆವುಡಿ ಸ್ಪೋರ್ಟ್ಸ್ ಆರ್ 8 ಕಾರುಗಳನ್ನು ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆವುಡಿ ಸ್ಪೋರ್ಟ್ಸ್ ಆರ್-8 ಕಾರನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ನಮಗೆ ಈಗಾಗಲೇ ಭಾರತದಲ್ಲಿರುವ ಗ್ರಾಹಕರು ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದಾರೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮಾರ್ಟಿನ್ ಬಿರ್ಕನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ 2007ರಲ್ಲಿ ಭಾರತದಲ್ಲಿ 350 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ಮೂರು ಪಟ್ಟು ಕಾರುಗಳ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ, ವಿಶೇಷವಾಗಿ ಎ4 ಸೆಡಾನ್ ಕಾರುಗಳು ಜುಲೈ ತಿಂಗಳಲ್ಲಿಯೇ ಮಾರುಕಟ್ಟೆಗೆ ಬರಲಿವೆ ಎಂದು ತಿಳಿಸಿದ್ದಾರೆ.
ನೂತನವಾದ ಆವುಡಿ ಎ4 ಅತ್ಯಾಧುನಿಕ ಉತ್ಪನ್ನವಾಗಿದ್ದು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ವರ್ಷದ ಅಂತ್ಯದವರೆಗೆ 1ಸಾವಿರ ಕಾರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದ್ದು, ಭಾರತದಲ್ಲಿ ಎ8, ಕ್ಯೂ7, ಎ6, ಎ4 ಮತ್ತು ಟಿಟಿ ಕಾರುಗಳು ಉತ್ತಮಶ್ರೇಣಿಯ ಕಾರುಗಳಾಗಿದ್ದರಿಂದ ನಮ್ಮ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಬಿರ್ಕನರ್ ಹೇಳಿದ್ದಾರೆ.
"ಮಾರುಕಟ್ಟೆಗೆ ಬಂದ ಹನ್ನೆರಡು ತಿಂಗಳಿನಲ್ಲಿ 1000 ಆವುಡಿ ಎ4 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಸೆಡಾನ್ ಕಾರು ಜನೆವರಿಯಿಂದ ಜೂನ್‌ವರೆಗೆ 470 ಕಾರುಗಳನ್ನು ಮಾರಾಟ ಮಾಡಲಾಗಿದ್ದರಿಂದ 1 ಸಾವಿರ ಕಾರುಗಳ ಮಾರಾಟದ ಗುರಿಯನ್ನು ಯಶಸ್ವಿಯಾಗುವ ನಿರೀಕ್ಷೆಯಿದೆ" ಎಂದು ಬಿರ್ಕನರ್ ಹೇಳಿದ್ದಾರೆ.
|