ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ  Search similar articles
ಕಾರು ಉತ್ಪಾದಕ ಸಂಸ್ಥೆಯಾದ ಮಾರುತಿ ಸುಝುಕಿ ಸೋಮವಾರದಂದು ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ 499.6 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದ್ದು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ 465.9 ಕೋಟಿ ರೂ.ನಿವ್ವಳ ಲಾಭಗಳಿಸಿದೆ.

2008ರ ನಾಲ್ಕನೇ ತ್ರೈಮಾಸಿಕದಲ್ಲಿ ಇಳಿತಾಯ ನೀತಿಯಿಂದಾಗಿ ಹೆಚ್ಚುವರಿಯಾಗಿ 61.9 ಕೋಟಿ ರೂ.ಗಳ ಹೊರೆಯಾಗಿದ್ದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿನ ಅಂಕಿ ಅಂಶಗಳು ಹೊಂದಾಣಿಕೆಗೆ ಬಾರದು ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ವರ್ಷದ ತ್ರೈಮಾಸಿಕ ಅವಧಿಯಲ್ಲಿ 4,731 ಕೋಟಿ ರೂ.ಗಳ ನಿವ್ವಳ ಕಾರುಗಳ ಮಾರಾಟ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಶೇ 20.9 ರಷ್ಟು ಹೆಚ್ಚಳ ಸಾಧಿಸಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಒಟ್ಟು 1,92584 ಕಾರುಗಳ ದಾಖಲೆಯ ಮಾರಾಟ ಮಾಡಿ ಶೇ 13.5ರಷ್ಟು ಏರಿಕೆ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ ಸ್ವಿಫ್ಟ್‌, ಸ್ವಿಫ್ಟ್ ಡಿಜೈರ್ ಮತ್ತು ವ್ಯಾಗನ್‌ ಆರ್ ಕಾರುಗಳ ಮಾರಾಟದಲ್ಲಿ ಶೇ 12.1ರ ಅಭಿವೃದ್ಧಿಯನ್ನು ಸಾಧಿಸಿ 180,093 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.

2008-09ರ ಅವಧಿಯಲ್ಲಿ ಮಾರುತಿ ಸುಝುಕಿ ಕಂಪೆನಿ 12,491 ಕಾರುಗಳನ್ನು ರಫ್ತು ಮಾಡಿದ್ದು, ಕಳೆದ ವರ್ಷ 9,065 ಕಾರುಗಳನ್ನು ರಫ್ತು ಮಾಡಲಾಗಿತ್ತು.
ಮತ್ತಷ್ಟು
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು