ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ  Search similar articles
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿಯಾದ ಸತ್ಯಂ ಕಂಪ್ಯೂಟರ್ಸ್ ಸರ್ವಿಸ್ ಲಿಮಿಟೆಡ್, ಮೆಕ್ಸಿಕೊ, ಚಿಲಿ ಅಥವಾ ಉರುಗ್ವೆಯಲ್ಲಿ ಐಟಿ ಮತ್ತು ಬಿಪಿಒ ಅಭಿವೃದ್ಧಿ ಕೇಂದ್ರಗಳನ್ನು ಶ್ರೀಘ್ರದಲ್ಲಿ ಸ್ಥಾಪಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್, ಬ್ರೆಜಿಲ್‌ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಿದ ನಂತರ ಮೆಕ್ಸಿಕೊ ಮತ್ತು ಚಿಲಿ ಅಥವಾ ಉರುಗ್ವೆಯಲ್ಲಿ ಶೀಘ್ರದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸತ್ಯಂ ಕಂಪ್ಯೂಟರ್ ಅಧ್ಯಕ್ಷ ರಾಮ್ ಮ್ಯಾನಂಪತಿ ಹೇಳಿದ್ದಾರೆ.

ಅಮೆರಿಕವನ್ನು ಹೊರತುಪಡಿಸಿ, ಏಷ್ಯಾ ಫೆಸಿಫಿಕ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಯುರೋಪ್‌ ದೇಶಗಳಲ್ಲಿ ಮುಂಬರುವ ಕೆಲ ತ್ರೈಮಾಸಿಕಗಳಲ್ಲಿ ಹೆಚ್ಚಿನ ಬೆಳವಣಿಗೆಗಳಾಗುತ್ತಿವೆ, ಅಮೆರಿಕ ಶೇ.60 ವಹಿವಾಟು, ಯುರೋಪ್ ಶೇ.19.5 ಇತರ ದೇಶಗಳು ಶೇ.20.5ರಷ್ಟು ವಹಿವಾಟು ನಡೆಸುತ್ತಿವೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ, ಸಿಂಗಾಪುರ, ಕೆನಡಾ ಮತ್ತು ಲಾಟಿನ್ ಅಮೆರಿಕ ದೇಶಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುತ್ತಿವೆ. ಸತ್ಯಂ ಕಂಪ್ಯೂಟರ್ಸ್‌‌ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಶೇ.102ರಷ್ಟು ಆದಾಯದಲ್ಲಿ ಏರಿಕೆಯಾಗಿದ್ದು, ಏಷ್ಯಾ ರಾಷ್ಟ್ರಗಳಿಂದ ಬರುತ್ತಿರುವ ಶೇ.40 ರಷ್ಟು ಆದಾಯದಲ್ಲಿ ಶೀಘ್ರದಲ್ಲಿ ಏರಿಕೆಯಾಗಿ ಶೇ.50ಕ್ಕೆ ಏರಲಿದೆ ಎಂದು ಮ್ಯಾನಂಪತಿ ಹೇಳಿದ್ದಾರೆ.
ಮತ್ತಷ್ಟು
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ