ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ವಿಶೇಷ ಶಿಬಿರ  Search similar articles
ಉದ್ಯೋಗಿಗಳಿಗೆ ಆದಾಯ ವಿವರಣೆ ಸಲ್ಲಿಸುವ ಕುರಿತಂತೆ ಹೆಚ್ಚಿನ ವಿವರಗಳನ್ನು ನೀಡಲು ಆದಾಯ ತೆರಿಗೆ ಇಲಾಖೆ ಎರಡು ವಿಶೇಷ ಶಿಬಿರಗಳನ್ನು ಆಯೋಜಿಸಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಶಿಬಿರವನ್ನು ಮಯುರ್‌ ಭವನದಲ್ಲಿ ಜುಲೈ22 ರಿಂದ 25 ರವರೆಗ ಆಯೋಜಿಸಲಾಗಿದ್ದು, ಎರಡನೇ ಶಿಬಿರವನ್ನು ಪ್ರಗತಿ ಮೈದಾನದಲ್ಲಿ ಜುಲೈ 28ರಿಂದ 31ರ ವರೆಗೆ ಆಯೋಜಿಸಲಾಗಿದೆ ಎಂದು ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆಯೋಜಿಸಲಾದ ಶಿಬಿರಗಳಲ್ಲಿ ಸುಮಾರು ಐದುಲಕ್ಷ ಉದ್ಯೋಗಿಗಳು ಆದಾಯ ವಿವರಣೆ ಸಲ್ಲಿಸಲಿದ್ದು, ಕಳೆದ ವರ್ಷ ಆಯೋಜಿಸಿದ ಶಿಬಿರದಲ್ಲಿ 3.44 ಲಕ್ಷ ಉದ್ಯೋಗಿಗಳು ಮಾಹಿತಿ ಸಲ್ಲಿಸಿದ್ದರು.

ಉದ್ಯೋಗಿಗಳಿಗಾಗಿ ಐಟಿ ರಿಟರ್ನ್ ಸಲ್ಲಿಸಲು ಸಾಕಷ್ಟು ಕೌಂಟರ್‌ಗಳನ್ನು ತೆಗೆದಿದ್ದು, ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆಗೆಯಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ತೆರಿಗೆ ಪಾವತಿದಾರರು ಪಾನ್ ಕಾರ್ಡ್‌, ಪೋಸ್ಟಲ್‌ ಅಡ್ರೆಸ್, ಬ್ಯಾಂಕ್‌ಖಾತೆ ಸಂಖ್ಯೆ, ಚೆಕ್‌ನ ಅಡಿಯಲ್ಲಿರುವ ಒಂಬುತ್ತು ಸಂಖ್ಯೆಗಳ ವಿವರ, ತೆರಿಗೆ ಕಡಿತದ ಖಾತೆ ವಿವರಗಳನ್ನು ಹೊಂದಿರತಕ್ಕದ್ದು ಎಂದು ಆದಾಯ ಇಲಾಖೆ ಮಾಹಿತಿ ನೀಡಿದೆ.

ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಿತ ಆಯುಕ್ತರನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳಬೇಕು. ಇ-ರಿಟರ್ನ್ ವ್ಯವಸ್ಥೆಗಾಗಿ ವಿಶೇಷ ಕೌಂಟರ್‌ಗಳನ್ನು ಕೂಡಾ ತೆರೆಯಲಾಗಿದೆ ಎಂದು ಆದಾಯ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್
ಇರಾನ್ ಮಾತುಕತೆ ವಿಫಲ: ತೈಲ ದರ ಮತ್ತೆ ಏರಿಕೆ