ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರ ಕುಸಿತ : ಪ್ರತಿ ಬ್ಯಾರೆಲ್‌ಗೆ 131 ಡಾಲರ್‌  Search similar articles
ಗಲ್ಫ್‌ ಆಫ್ ಮೆಕ್ಸಿಕೊದ ಭೂಮಧ್ಯ ರೇಖೆಯಲ್ಲಿ ಬೀಸಿದ ಚಂಡಮಾರುತದಿಂದಾಗಿ ತೈಲ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದು ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ತೈಲ ದರಗಳಲ್ಲಿ ಕುಸಿತವಾಗಿದ್ದು, ಪ್ರತಿ ಬ್ಯಾರೆಲ್‌ಗೆ 131 ಡಾಲರ್‌ಗೆ ಕುಸಿದಿದೆ.

ಗಲ್ಫ್‌ನ ಪಶ್ಚಿಮ ಭಾಗದಲ್ಲಿರುವ ತೈಲ ಬಾವಿಗಳಿಂದ ಕಾರ್ಮಿಕರನ್ನು ತೆರುವುಗೊಳಿಸಲಾಗುತ್ತಿರುವುದರಿಂದ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುರೋಪ್‌ನ ಬೃಹತ್ ತೈಲ ಉತ್ಪಾದನಾ ಸಂಸ್ಥೆಯಾದ ರಾಯಲ್ ಡಚ್‌ ಶೆಲ್ ಹೇಳಿದೆ.

ಉಷ್ಣವಲಯದ ಚಂಡುಮಾರುತದಿಂದಾಗಿ ಮಾರುಕಟ್ಟೆಯ ತೈಲ ದರಗಳ ಮೇಲೆ ಯಾವುದೇ ಬೆದರಿಕೆ ಉಂಟಾಗುತ್ತದೆ ಅಥವಾ ಬಿಕ್ಕಟ್ಟು ಎದುರಾಗುತ್ತದೆ ಎಂದು ನಾವು ಭಾವಿಸಿಲ್ಲ ಎಂದು ಇಂಧನ ತಜ್ಞ ವಿಕ್ಟರ್‌ ಶುಮ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಅಗಸ್ಟ್‌‌ನಲ್ಲಿ ಬಿಡುಗಡೆ ಮಾಡಲಿರುವ ಕಚ್ಚಾ ತೈಲ 39 ಸೆಂಟ್‌ಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 130.65 ಡಾಲರ್‌ಗೆ ಕುಸಿತವಾಗಿದೆ.

ಸಂಭಾವ್ಯ ಚಂಡುಮಾರುತ ಹಾಗೂ ಇರಾನ್ ಪರಮಾಣು ಕಾರ್ಯಕ್ರಮ ಕುರಿತಂತೆ ಉಂಟಾಗುವ ಪ್ರಕ್ಷುಬ್ಧತೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲದ ಬೇಡಿಕೆಯ ಪ್ರಮಾಣದಲ್ಲಿ ಶೇ.74ರಷ್ಟು ಹೆಚ್ಚಳವಾಗುತ್ತಿದೆ ಎಂದು ವಿಕ್ಟರ್‌ಶುಮ್ ಹೇಳಿದ್ದಾರೆ.

ಚೀನಾ ದೇಶದಿಂದ ಕಚ್ಚಾ ತೈಲದ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದ್ದು, ಇರಾನ್ ಪರಿಸ್ಥಿತಿ ಅಸ್ಥಿರವಾಗುತ್ತಿದೆ, ಮುಂಬರುವ ದಿನಗಳಲ್ಲಿ ತೈಲ ದರದಲ್ಲಿ ಕುಸಿತವಾಗಬಹುದು ಎಂಬ ನಿರೀಕ್ಷೆಯಿದೆ ಎಂದು ಇಂಧನ ತಜ್ಞರಾದ ವಿಕ್ಟರ್ ಶುಮ್ ಹೇಳಿದ್ದಾರೆ.
ಮತ್ತಷ್ಟು
ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ವಿಶೇಷ ಶಿಬಿರ
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ
ಮಾರ್ಗಗಳ ಕಡಿತಕ್ಕೆ ಏರ್‌ಇಂಡಿಯಾ ಚಿಂತನೆ-ಪ್ರಫುಲ್