ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನರಂಜನಾ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ  Search similar articles
ವಿದೇಶಿ ಹಣಹೂಡಿಕೆಗೆ ಆಕರ್ಷಣೀಯ ದೇಶವಾದ ಭಾರತ, ಜಗತ್ತಿನ ಮನರಂಜನಾ ಮಾರುಕಟ್ಟೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ ಪಡೆದಿದೆ ಎಂದು ಪ್ರೈಸ್‌ವಾಟರ್‌ ಹೌಸ್ ಕೋಓಪರ್ಸ್ ಅಧಿಕಾರಿಗಳು ಹೇಳಿದ್ದಾರೆ.

ದೇಶದ ಮಾಧ್ಯಮ ಹಾಗೂ ಮನರಂಜನಾ ಮಾರುಕಟ್ಟೆ ವಾರ್ಷಿಕವಾಗಿ ಶೇ 18.5ರಷ್ಟು ಹೆಚ್ಚಳವಾಗುತ್ತಿದ್ದು, ಮುಂಬರುವ 2012ರ ವೇಳೆಗೆ 36 ಬಿಲಿಯನ್ ಡಾಲರ್‌ಗೆ ತಲುಪಲಿದೆ. ಏಷ್ಯಾದ ಮನರಂಜನಾ ಮಾರುಕಟ್ಟೆ ಮುಂದಿನ ಐದು ವರ್ಷಗಳಲ್ಲಿ 508 ಬಿಲಿಯನ್ ಡಾಲರ್‌ಗಳಿಗೆ ಎಂದು ಸಂಸ್ಥೆಯ ಸಮೀಕ್ಷೆ ವರದಿ ಮಾಡಿದೆ.

ಜಗತ್ತಿನ ಮನರಂಜನಾ ಮಾರುಕಟ್ಟೆಯಲ್ಲಿ ಭಾರತವನ್ನು ಮೊದಲಿನ ಮೂರು ಸ್ಥಾನಗಳಲ್ಲಿ ನೋಡಬಹುದಾಗಿದೆ ಎಂದು ಎಂಟರ್‌ಟೇನ್‌ಮೆಂಟ್ ಆಂಡ್ ಮೀಡಿಯಾ ಪ್ರ್ಯಾಕ್ಟಿಸ್ ಪಾಲುದಾರ ಮಾರ್ಸೆಲ್ ಫೆಂಜ್ ಅಭಿಪ್ರಾಯಪಟ್ಟಿದ್ದಾರೆ.

ಸೌದಿ ಅರೇಬಿಯಾ, ಇಂಡೋನೇಶಿಯಾ, ವಿಯಟ್ನಾಂ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ಉದಯೋನ್ಮುಖ ರಾಷ್ಟ್ರಗಳಾಗಿವೆ ಎಂದು ಹೇಳಿದ್ದಾರೆ.

ಮನರಂಜನಾ ಮಾರುಕಟ್ಟೆಯು ಭಾರತದ ಆರ್ಥಿಕತೆಯಲ್ಲಿ ವೇಗವಾಗಿ ಸಾಗುತ್ತಿರುವುದಲ್ಲದೇ ಮುಕ್ತ ಮಾರುಕಟ್ಟೆ ಒದಗಿಸಿದ ಹಿನ್ನಲೆಯಲ್ಲಿ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಿದ್ದು, ಏಷ್ಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ತೈಲ ದರ ಕುಸಿತ : ಪ್ರತಿ ಬ್ಯಾರೆಲ್‌ಗೆ 131 ಡಾಲರ್‌
ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ವಿಶೇಷ ಶಿಬಿರ
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ
ಇಂಡಿಯನ್ ಬ್ಯಾಂಕ್‌ಗೆ 436.63 ಕೋಟಿ ಲಾಭ