ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಐಐಯಿಂದ ಹೊರಗುತ್ತಿಗೆ ವಿಚಾರಸಮ್ಮೇಳನ  Search similar articles
ಉತ್ತರ ಭಾರತದ ಕೈಗಾರಿಕೋದ್ಯಮದ ಮಹಾ ಒಕ್ಕೂಟ ಅಗಸ್ಟ್‌ 8ರಂದು ಇಂಡಿಯಾ ಎಮರ್ಜಿಂಗ್ ಗ್ಲೋಬಲ್ ಸೋರ್ಸಿಂಗ್ ಹಬ್‌ ವಿಚಾರದ ಕುರಿತಂತೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ವಿಚಾರ ಸಂಕಿರಣವು ಗುತ್ತಿಗೆ ಆಧಾರಿತ ಸೇವೆ ಕುರಿತಂತೆ ಪರಸ್ಪರ ಅಭಿಪ್ರಾಯಗಳು, ಅನಿಸಿಕೆಗಳಿಗೆ ವೇದಿಕೆಯಾಗಲಿದೆ ಎಂದು ವರ್ಧಮಾನ್ ಗ್ರೂಪ್‌ನ ಮುಖ್ಯಸ್ಥ ಹಾಗೂ ಕಾರ್ಯಕಾರಿ ನಿರ್ದೇಶಕ ಸಚಿತ್ ಜೈನ್ ತಿಳಿಸಿದ್ದಾರೆ.

ಇಂಡಿಯಾ ಎಮರ್ಜಿಂಗ್ ಗ್ಲೋಬಲ್ ಸೋರ್ಸಿಂಗ್ ಹಬ್‌ ಸಮ್ಮೇಳನವನ್ನು ಸೋರ್ಸಿಂಗ್ ಉದ್ಯಮಗಳಲ್ಲಿರುವ ತಜ್ಞರ ಅನುಭವ ಹಾಗೂ ಜ್ಞಾನವನ್ನು ಪಡೆಯಲು ಆಯೋಜಿಸಲಾಗಿದೆ. ಇದರಿಂದ ಹೊರಗುತ್ತಿಗೆ, ಸರಬರಾಜು, ಸಂಬಂಧಗಳ ಬಿಕ್ಕಟ್ಟುಗಳು ಹಾಗೂ ಇನ್ನಿತರ ಮಾಹಿತಿ ಕುರಿತು ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ.

ಕಡಿಮೆ ವೆಚ್ಚದಲ್ಲಿ ಗ್ಲೋಬಲ್ ಸೋರ್ಸಿಂಗ್ ಕಾರ್ಯವನ್ನು ಭಾರತ ನಿರ್ವಹಿಸುತ್ತಿದ್ದು ಇದು ಸುರಕ್ಷಿತ ಸ್ಥಳವಾಗಿದೆ. ಪೂರೈಕೆ ಕಾರ್ಯಕ್ಷಮತೆ ವ್ಯವಸ್ಥಾಪನೆ ಮತ್ತು ಪ್ರತಿಭಾ ನಿರ್ವಹಣೆ ಕುರಿತಂತೆ ಹೆಚ್ಚಿನ ವಿವರಣೆ ಸಮ್ಮೇಳನದಲ್ಲಿ ದೊರೆಯಲಿದೆ ಎಂದು ಜೈನ್ ಹೇಳಿದ್ದಾರೆ.
ಮತ್ತಷ್ಟು
ಮನರಂಜನಾ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ
ತೈಲ ದರ ಕುಸಿತ : ಪ್ರತಿ ಬ್ಯಾರೆಲ್‌ಗೆ 131 ಡಾಲರ್‌
ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ವಿಶೇಷ ಶಿಬಿರ
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ
ಸ್ಪೋರ್ಟ್ಸ್ ಕಾರ್ ಶೀಘ್ರ ಮಾರುಕಟ್ಟೆಗೆ ಬಿಡುಗಡೆ