ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಇಂಡೋ-ಅಮೆರಿಕ ಚೇಂಬರ್ ಸ್ವಾಗತ  Search similar articles
ಭಾರತ -ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಅಮೆರಿಕ-ಇಂಡೋ ವ್ಯಾಪಾರ ಸಮಿತಿ ಬೆಂಬಲಿಸಿದ್ದು, ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂಸತ್ತಿನಲ್ಲಿ ಯುಪಿಎ ಸರಕಾರ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿರುವುದನ್ನು ಶ್ಲಾಘಿಸಿದ ಯುಎಸ್‌ಬಿಐಸಿ ಅಧ್ಯಕ್ಷ ರೋನ್‌‌ ಸೊಮರ್ಸ್, ಇದು ಜಗತ್ತಿಗೆ ಹಾಗೂ ಭಾರತಕ್ಕೆ ಐತಿಹಾಸಿಕ ವಿಜಯವಾಗಿದೆ, ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕಾರ್ಯಕ್ರಮದಿಂದ ಅಣುಕ್ಷೇತ್ರದಲ್ಲಿ ಹೊಸ ಹುಟ್ಟು ದೊರೆತಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ, ಅಂತಾರಾಷ್ಟ್ರೀಯ ಅಣು ಇಂಧನ ಏಜೆನ್ಸಿಯ ಸುರಕ್ಷಾ ಒಪ್ಪಂದದ ಅನುಮತಿಗಾಗಿ ನಿರೀಕ್ಷಿಸುತ್ತಿದೆ. ನಂತರ 45 ದೇಶಗಳ ಪರಮಾಣು ಸರಬರಾಜು ಸಮೂಹದ ಅನುಮತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ,ರಷ್ಯಾ, ಬ್ರಿಟನ್, ಫ್ರಾನ್ಸ್, ರಷ್ಯಾ, ಜಪಾನ್, ಚೀನಾ ಮತ್ತು ಇತ್ತೀಚೆಗೆ ಆಸ್ಟ್ರೇಲಿಯಾ ದೇಶಗಳು ಪರಮಾಣು ಸರಬರಾಜು ಸಮೂಹಕ್ಕೆ ಸೇರಿದ್ದು, ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿವೆ ಎಂದು ಇಂಡೋ-ಅಮೆರಿಕ ವಹಿವಾಟು ಸಮಿತಿಯ ರೋನಾ ಸೊಮರ್ಸ್ ಹೇಳಿದ್ದಾರೆ.
ಮತ್ತಷ್ಟು
ಸಿಐಐಯಿಂದ ಹೊರಗುತ್ತಿಗೆ ವಿಚಾರಸಮ್ಮೇಳನ
ಮನರಂಜನಾ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ
ತೈಲ ದರ ಕುಸಿತ : ಪ್ರತಿ ಬ್ಯಾರೆಲ್‌ಗೆ 131 ಡಾಲರ್‌
ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ವಿಶೇಷ ಶಿಬಿರ
ದಕ್ಷಿಣ ಅಫ್ರಿಕಾದಲ್ಲಿ ಐಟಿ ಘಟಕ ಸ್ಥಾಪನೆ - ಸತ್ಯಂ
ಮಾರುತಿ ಸುಝುಕಿ: 465.9 ಕೋಟಿ ನಿವ್ವಳ ಲಾಭ