ಯಾಹೂ ಇಂಕ್ ಮಂಗಳವಾರದಂದು ತನ್ನ ತ್ರೈಮಾಸಿಕ ಹಣಕಾಸು ವರದಿಯನ್ನು ಬಿಡುಗಡೆ ಮಾಡಿದ್ದು ನಿವ್ವಳ ಲಾಭದಲ್ಲಿ ಶೇ.19ರಷ್ಟು ಇಳಿಕೆಯಾಗಿದೆ.
ಮೈಕ್ರೋಸಾಫ್ಟ್ ಶೇರುಗಳ ಖರೀದಿ ಹಾಗೂ ಬಲಹೀನ ಆರ್ಥಿಕತೆಯಿಂದಾಗಿ ನಿವ್ವಳ ಲಾಭದಲ್ಲಿ ವಾಲ್‌ಸ್ಟ್ರೀಟ್ ನಿರೀಕ್ಷೆಗಿಂತ ಆದಾಯದಲ್ಲಿ ಕೊರತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾಹೂ ಇಂಕ್‌ನ ಮುಖ್ಯ ಹಣಕಾಸು ಅಧಿಕಾರಿ ಬ್ಲೇಕ್ ಜಾರ್ಗೆನ್ಸನ್ , ಆನ್‌ಲೈನ್ ಜಾಹೀರಾತಿನ ಮೇಲೆ ಆರ್ಥಿಕ ಪರಿಸರ ಕಠಿಣವಾಗಿದ್ದರೂ 2008ರ ಹಣಕಾಸಿನ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದಾರೆ.
ವಿಸ್ತರಿತ ವಹಿವಾಟಿನಲ್ಲಿ ಯಾಹೂ ಶೇರುಗಳು ಶೇ 1ರಷ್ಟು ಹೆಚ್ಚಳವಾಗಿದ್ದು, ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಇಳಿಕೆಯಾಗಿ 131 ಮಿಲಿಯನ್ ಡಾಲರ್‌ಗಳಿಗೆ ಇಳಿದಿದೆ. ಕಳೆದ ವರ್ಷ 163 ಮಿಲಿಯನ್ ಡಾಲರ್ ಲಾಭಗಳಿಸಿದದದು, ಪ್ರಸ್ತುತ ಅವಧಿಯಲ್ಲಿ ಪ್ರತಿ ಶೇರುಗಳಿಗೆ 11 ಸೆಂಟ್ ಇಳಿಕೆಯಾಗಿದೆ.
ಕಂಪೆನಿಯ ಒಟ್ಟು ಆದಾಯದಲ್ಲಿ ಶೇ 6ರಷ್ಟು ಹೆಚ್ಚಳವಾಗಿ 1,798 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ವೆಬ್‌ಸೈಟ್‌ಗಳಿಗೆ ಬರುವ ನಿವ್ವಳ ಆದಾಯವನ್ನು ಹೊರತುಪಡಿಸಿ ಯಾಹೂ ಜಾಹೀರಾತು ಸೇವೆಗಳಲ್ಲಿ ಶೇ 8ರಷ್ಟು ಏರಿಕೆಯಾಗಿ 1.35 ಬಿಲಿಯನ್ ಡಾಲರ್‌ಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.
|