ಸಂಸತ್ತಿನಲ್ಲಿ ವಿಶ್ವಾಸಮತ ಪಡೆದ ನಂತರ ಯುಪಿಎ ಸರಕಾರ ಮುಂಬರುವ ಪೀಳಿಗೆಗಾಗಿ 3ಜಿ ಹಾಗೂ ವಿ ಮ್ಯಾಕ್ಸ್, ಮೊಬೈಲ್ ಸರ್ವಿಸ್ ಕುರಿತಂತೆ ಶೀಘ್ರದಲ್ಲಿ ನಿಯಮಗಳನ್ನು ಬಿಡುಗಡೆ ಮಾಡಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜಾ ತಿಳಿಸಿದ್ದಾರೆ.
ನಿಯಮಾವಳಿಗಳನ್ನು ಬಿಡುಗಡೆ ಮಾಡಲು ಯಾವುದೇ ಸಮಯ ನಿಗದಿ ಇಲ್ಲ. ಆದರೆ ನಿಯಮ ಬದಲಾವಣೆಗೆ ಸೆಕ್ಟರ್ ರೆಗ್ಯೂಲೆಟರ್ ಟ್ರಾಯ್ ಈಗಾಗಲೇ ಸಮ್ಮತಿಸಿದ್ದರಿಂದ ಮುಂಬರುವ ಒಂದು ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3ಜಿ ಹಾಗೂ ವೈರ್‌ಲೆಸ್ ಬ್ರಾಡ್ ಬ್ಯಾಂಡ್ ಸೇವೆಗಳ ಸ್ಪೆಕ್ಟ್ರಮ್ ಪಡೆಯಲು ಕನಿಷ್ಟ 60 ಕೋಟಿ ರೂ.ಗಳಿಂದ ಹರಾಜನ್ನು ಆರಂಭಿಸಬೇಕು ಎಂದು ಟ್ರಾಯ್ ಜುಲೈ 11 ರಂದು ಸಲಹೆ ನೀಡಿತ್ತು.
ಆಪರೇಟರ್‌ಗಳು ಮೀಸಲು ದರವನ್ನು ಹೊರತುಪಡಿಸಿ ಆಯಾ ವೃತ್ತಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಭದ್ರತೆ ನೀಡುವುದು ಅಗತ್ಯವಾಗಿದೆ ಎಂದು ರೆಗ್ಯೂಲೆಟರ್ ಹೇಳಿಕೆ ನೀಡಿತ್ತು
|