ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ  Search similar articles
ದೇಶದಲ್ಲಿ ಕೇಂದ್ರ ಸರಕಾರಕ್ಕೆ ಎದುರಾಗಿದ್ದ ರಾಜಕೀಯ ಬಿಕ್ಕಟ್ಟು ಹಾಗೂ ಕಚ್ಚಾ ತೈಲ ದರಗಳ ಇಳಿಕೆಯ ಹಿನ್ನೆಲೆಯಲ್ಲಿ ಡಾಲರ್‌ ಎದುರುಗಡೆ ರೂಪಾಯಿ ಮೌಲ್ಯ ಏಳು ವಾರಗಳ ಹೆಚ್ಚಳ ಕಂಡಿದೆ.

ಬೆಳಗಿನ ಹಂತದಲ್ಲಿ ಪ್ರತಿ ಡಾಲರ್‌ಗೆ 42.32/33 ರೂ.ಗಳ ಏರಿಕೆಯಾಗಿದ್ದು, ಮಂಗಳವಾರದಂದು ಮುಕ್ತಾಯವಾದ ವಹಿವಾಟಿಗಿಂತ ಶೇ 1ರಷ್ಟು ಹೆಚ್ಚಳವಾಗಿತ್ತು.

ಅಮೆರಿಕದೊಂದಿಗೆ ಅಣು ಒಪ್ಪಂದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ, ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಸರಕಾರ ವಿಶ್ವಾಸಮತ ಅಧಿವೇಶನದಲ್ಲಿ ಗೆಲುವು ಸಾಧಿಸಿದ ನಂತರ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿತು ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಸರಕಾರ ವಿಶ್ವಾಸಮತ ಗಳಿಸಿದ್ದರಿಂದ ಹಾಗೂ ಕಚ್ಚಾ ತೈಲದ ದರಗಳಲ್ಲಿ ಇಳಿಕೆಯಾಗಿದ್ದು ಈ ಎರಡು ಅಂಶಗಳು ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಲು ಕಾರಣವಾಯಿತು. ಶೇರುಗಳು ಕೂಡಾ ಚೇತರಿಸಿಕೊಂಡಿರುವುದು ಕಾರಣವಾಗಿದೆ ಎಂದು ಡೆವೆಲಪ್‌ಮೆಂಟ್‌ ಕ್ರೆಡಿಟ್‌ ಬ್ಯಾಂಕ್‌ನ ಮುಖ್ಯ ವಿತರಕ ಪರೇಶ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
3ಜಿ ಮೊಬೈಲ್ ಸೇವೆ ನಿಯಮಗಳು ಪ್ರಕಟ-ರಾಜಾ
ಯಾಹೂ : ನಿವ್ವಳ ಲಾಭದಲ್ಲಿ ಶೇ 19ರಷ್ಟು ಇಳಿಕೆ
ಸರಕಾರ ಆರ್ಥಿಕ ಸುಧಾರಣೆಯಲ್ಲಿ ಮುಂದುವರಿಯಲಿದೆ: ಚಿದು
ಅಣು ಒಪ್ಪಂದ: ಇಂಡೋ-ಅಮೆರಿಕ ಚೇಂಬರ್ ಸ್ವಾಗತ
ಸಿಐಐಯಿಂದ ಹೊರಗುತ್ತಿಗೆ ವಿಚಾರಸಮ್ಮೇಳನ
ಮನರಂಜನಾ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ