ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ  Search similar articles
ದೇಶದ ಪ್ರಖ್ಯಾತ ಮೊಬೈಲ್ ಆಪರೇಟರ್‌ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಲಾಭದಲ್ಲಿ ಶೇ 34ರಷ್ಟು ಏರಿಕೆಯಾಗಿ 2,025 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರ್ತಿ ಏರ್‌ಟೆಲ್ ದಕ್ಷಿಣ ಏಷಿಯಾದ ಮೊಬೈಲ್ ಸೇವೆಯಲ್ಲಿ ಶೇ 30ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಕ್ರೋಡೀಕೃತ ಒಟ್ಟು ನಿವ್ವಳ ಲಾಭ 20.25 ಬಿಲಿಯನ್ ಡಾಲರ್‌ಗಳಾಗಿದೆ. ಕಳೆದ ವರ್ಷ ಜೂನ್ 30ಕ್ಕೆ ಅಂತ್ಯಗೊಂಡಂತೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕ್ರೋಡೀಕೃತ ಒಟ್ಟು ನಿವ್ವಳ ಲಾಭ 15.12 ಬಿಲಿಯನ್ ಡಾಲರ್‌ಗಳಾಗಿತ್ತು.

ಭಾರ್ತಿ ಏರ್‌ಟೆಲ್ ಮೊಬೈಲ್ ಸೇವಾ ಸಂಸ್ಥೆ ಭಾರತದ 23 ಸೇವಾ ಕೇಂದ್ರಗಳಲ್ಲಿ ಜನಪ್ರಿಯ ಜಿಎಸ್‌ಎಂ ಸೇವೆಯನ್ನು ನೀಡುತ್ತಿದ್ದು, ದೇಶದ ಒಟ್ಟು ಮೊಬೈಲ್ ಗ್ರಾಹಕರಲ್ಲಿ ಶೇ25ರಷ್ಟು ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ 7.4 ಮಿಲಿಯನ್ ಜನರು ಹೊಸ ಗ್ರಾಹಕರಾಗಿದ್ದಾರೆ ಎಂದು ಪ್ರಕಟಿಸಿದೆ.

ನವದೆಹಲಿ ಮೂಲದ ಭಾರ್ತಿ ಏರ್‌ಟೆಲ್ ಕಂಪೆನಿ ದೇಶದ ಎರಡನೇ ಮೊಬೈಲ್ ಸೇವಾ ಸಂಸ್ಥೆಯಾದ ರಿಲಯನ್ಸ್ ಹಾಗೂ ವೊಡಾಪೋನ್‌ಗಳೊಂದಿಗೆ ಸ್ಪರ್ಧೆಯನ್ನು ಎದುರಿಸುತ್ತಿದೆ.
ಮತ್ತಷ್ಟು
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ
3ಜಿ ಮೊಬೈಲ್ ಸೇವೆ ನಿಯಮಗಳು ಪ್ರಕಟ-ರಾಜಾ
ಯಾಹೂ : ನಿವ್ವಳ ಲಾಭದಲ್ಲಿ ಶೇ 19ರಷ್ಟು ಇಳಿಕೆ
ಸರಕಾರ ಆರ್ಥಿಕ ಸುಧಾರಣೆಯಲ್ಲಿ ಮುಂದುವರಿಯಲಿದೆ: ಚಿದು
ಅಣು ಒಪ್ಪಂದ: ಇಂಡೋ-ಅಮೆರಿಕ ಚೇಂಬರ್ ಸ್ವಾಗತ
ಸಿಐಐಯಿಂದ ಹೊರಗುತ್ತಿಗೆ ವಿಚಾರಸಮ್ಮೇಳನ