ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನದ ಬೇಡಿಕೆಯಲ್ಲಿ ಕುಸಿತ  Search similar articles
ಕಳೆದ ಎರಡು ತಿಂಗಳುಗಳಿಂದ ಚಿನ್ನದ ಬೇಡಿಕೆಯಲ್ಲಿ ನಿರಂತರ ಏರಿಕೆ ಕಂಡಿದ್ದ ಚಿನಿವಾರಪೇಟೆಯಲ್ಲಿ ಚಿನ್ನದ ಆಭರಣಗಳ ಬೇಡಿಕೆ ಕುಸಿತವನ್ನು ಕಂಡಿದೆ. ವರದಿಯೊಂದರ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಶೇ.21ರಷ್ಟು ಕುಸಿತಗೊಂಡಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಿಡುಗಡೆಗೊಳಿಸಿರುವ ತ್ರೈಮಾಸಿಕ ವರದಿಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಎನ್ನುವ ರೀತಿಯಲ್ಲಿ ಈ ತ್ರೈಮಾಸಿಕ ಅವಧಿಯಲ್ಲಿ ಚಿನ್ನದ ಬೇಡಿಕೆಯು ಶೇ.21ರಷ್ಟು ಕುಸಿತವನ್ನು ಕಂಡಿದ್ದು, ಈ ಬಾರಿ ಅದು 445.4 ಟನ್‌ಗೆ ಮಾತ್ರವೇ ಬೇಡಿಕೆ ಇತ್ತು. ಇದು 1993ರ ನಂತರದ ಕನಿಷ್ಟ ತ್ರೈಮಾಸಿಕ ಬೇಡಿಕೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಉಂಟಾದ ತೀವ್ರ ಬೇಡಿಕೆಯ ಕುಸಿತವು ಚಿನ್ನದ ಆಭರಣಗಳ ಇಳಿಕೆಗೆ ಮುಖ್ಯ ಕಾರಣವಾಗಿದೆ. ಕಳೆದ ವರ್ಷಕ್ಕೂ ಮತ್ತು ಈ ವರ್ಷಕ್ಕೂ ಹೋಲಿಸಿದಲ್ಲಿ ಚಿನ್ನದ ಬೇಡಿಕೆಯ ಅಂತರ 70 ಟನ್ ಪ್ರಮಾಣದಷ್ಟು ಕುಸಿತಗೊಂಡಿದೆ ಎಂದು ವರದಿಯು ತಿಳಿಸಿದೆ.

ಇದರ ಜೊತೆ ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಉಂಟು ಮಾಡಿರುವ,ಪ್ರಮುಖ ಅಂಶಗಳೆಂದರೆ ನಗದು ಏರಿಳಿತ ಮತ್ತು ಆರ್ಥಿಕ ಬೆಳವಣಿಗೆ ಎಂದು ವರದಿಯು ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಕುಂಠಿತಗೊಳ್ಳುವಂತೆ ಮಾಡುವಲ್ಲಿ ಭಾರತದ ಕೊಡುಗೆ ಹೆಚ್ಚಿನದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಗಾತ್ರತೆಯಲ್ಲಿ ಸುಮಾರು 31 ಟನ್ ಪ್ರಮಾಣದಷ್ಟು ಇಳಿಕೆಯು ಉಂಟಾಗಿದೆ ಎಂದು ವರದಿ ತಿಳಿಸಿದೆ.
ಮತ್ತಷ್ಟು
ಹವಾಮಾನ ಉದ್ಯಮದಲ್ಲಿ ಮಹತ್ವದ ಪಾತ್ರ
ವಿಮೆ ಮಸೂದೆಗೆ ಒಮ್ಮತದ ನಿರ್ಧಾರ-ಚಿದಂಬರಂ
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ
3ಜಿ ಮೊಬೈಲ್ ಸೇವೆ ನಿಯಮಗಳು ಪ್ರಕಟ-ರಾಜಾ
ಯಾಹೂ : ನಿವ್ವಳ ಲಾಭದಲ್ಲಿ ಶೇ 19ರಷ್ಟು ಇಳಿಕೆ