ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕ್ತ ವ್ಯಾಪಾರದ ಮಾತುಕತೆ ಪೂರ್ಣ-ಕಮಲ್‌ನಾಥ್  Search similar articles
ಮುಕ್ತ ವ್ಯಾಪಾರದ ಮಾತುಕತೆಯು ಇನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳ್ಳುವ ಭರವಸೆಯನ್ನು ಹೊಂದಲಾಗಿದೆ. ಇನ್ನು ಕೆಲವು ಸಂಗತಿಗಳು ಮಾತ್ರವೇ ಬಗೆಹರಿಯಬೇಕಾಗಿದೆ ಎಂದು ವಾಣಿಜ್ಯ ಸಚಿವ ಕಮಲ್‌ನಾಥ್ ಹೇಳಿದ್ದಾರೆ.

ಭಾರತ ಮತ್ತು ಆಸಿಯಾನ್ ನಡುವಿನ ಬಿಕ್ಕಟ್ಟು ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದ್ದು, ಈ ವರ್ಷಾಂತ್ಯಕ್ಕೆ ಅದು ಉತ್ತಮ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಳೆದೊಂದು ವರ್ಷದಲ್ಲಿ ನಡೆಸಲಾದ ಪ್ರಯತ್ನಗಳಲ್ಲಿ ಉಂಟಾಗಿದ್ದ ಹಲವಾರು ಬಿಕ್ಕಟ್ಟುಗಳನ್ನು ಪರಿಹರಿಸಲಾಗಿದೆ, ಅದರ ಫಲಿತಾಂಶಗಳಶನ್ನು ಇನ್ನು ಮುಂದೆ ಕಾಣಬೇಕಾಗಿದೆ ಎಂದು ಆಸಿಯಾನ್ ವಕ್ತಾರ ಆಂಡ್ರ್ಯೂ ಟಾನ್ ತಿಳಿಸಿದರು.

ಏಷ್ಯಾ ಈಶಾನ್ಯ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್),10 ಸದಸ್ಯ ರಾಷ್ಟ್ರಗಳ ನಡುವೆ ಸಿಂಗಾಪುರ್‌ದಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಇದರಲ್ಲಿ ಸಚಿವರುಗಳು ಮತ್ತು ಅಧಿಕಾರಿಗಳು ಭಾಗವಹಿಸಿ ಮಾತುಕತೆಯನ್ನು ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತ - ಆಸಿಯಾನ್ ನಡುವೆ ಇದೊಂದು ಮಹತ್ವದ ಮಾತುಕತೆಯಾಗಿದ್ದು, ಇದು ಈ ವರ್ಷದ ಅಂತ್ಯದ ವೇಳೆಗೆ ಫಲಿತಾಂಶ ನೀಡುವ ಸಾಧ್ಯತೆ ಇದೆ. ಅದರ ಫಲಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಚಿನ್ನದ ಬೇಡಿಕೆಯಲ್ಲಿ ಕುಸಿತ
ಹವಾಮಾನ ಉದ್ಯಮದಲ್ಲಿ ಮಹತ್ವದ ಪಾತ್ರ
ವಿಮೆ ಮಸೂದೆಗೆ ಒಮ್ಮತದ ನಿರ್ಧಾರ-ಚಿದಂಬರಂ
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ
3ಜಿ ಮೊಬೈಲ್ ಸೇವೆ ನಿಯಮಗಳು ಪ್ರಕಟ-ರಾಜಾ