ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೈಕ್ಷಣಿಕ ಸಾಲಕ್ಕಾಗಿ ಸಹಾಯಧನ-ಅರ್ಜುನ್‌ಸಿಂಗ್  Search similar articles
ವೃತ್ತಿಪರ ಶಿಕ್ಷಣವನ್ನು ಪಡೆಯುತ್ತಿರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸಹಾಯ ಧನ ಹಾಗೂ ಶಿಷ್ಯವೇತನ ಯೋಜನೆಯನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಅರ್ಜುನ್‌‌ಸಿಂಗ್ ಹೇಳಿದ್ದಾರೆ.

ವೃತ್ತಿಪರ ಶಿಕ್ಷಣವನ್ನು ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಕ್ಕಾಗಿ ಬಡ್ಡಿ ಸಹಾಯಧನವನ್ನು ನೀಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ನವದೆಹಲಿಯಲ್ಲಿ ನಡೆದ ಉನ್ನತ ಶಿಕ್ಷಣ ಸಚಿವರ ಸಮ್ಮೆಳನದಲ್ಲಿ ಕೇಂದ್ರ ಸಚಿವ ಅರ್ಜುನ್‌ಸಿಂಗ್‌ ತಿಳಿಸಿದ್ದಾರೆ.

ಸರಕಾರ ರಾಷ್ಟ್ರೀಯ ಮಟ್ಟದ ಮೆರಿಟ್‌ ಶಿಷ್ಯವೇತನ ಯೋಜನೆಯನ್ನು ಆರಂಭಿಸಲಿದ್ದು, ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಹ 41ಸಾವಿರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುವುದು ಎಂದರು.

ಈ ಯೋಜನೆಯಡಿ ವಿದ್ಯಾರ್ಥಿಗಳು ಪ್ರತಿ ತಿಂಗಳು 1ಸಾವಿರ ರೂ.ಗಳನ್ನು ಮೊದಲ ಎರಡು ವರ್ಷಗಳ ಹತ್ತು ತಿಂಗಳವರೆಗೆ ನೀಡಲಾಗುವುದು. ನಂತರ ಪ್ರತಿ ತಿಂಗಳು 2ಸಾವಿರ ರೂ.ಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಮತ್ತಷ್ಟು
ಮುಕ್ತ ವ್ಯಾಪಾರದ ಮಾತುಕತೆ ಪೂರ್ಣ-ಕಮಲ್‌ನಾಥ್
ಚಿನ್ನದ ಬೇಡಿಕೆಯಲ್ಲಿ ಕುಸಿತ
ಹವಾಮಾನ ಉದ್ಯಮದಲ್ಲಿ ಮಹತ್ವದ ಪಾತ್ರ
ವಿಮೆ ಮಸೂದೆಗೆ ಒಮ್ಮತದ ನಿರ್ಧಾರ-ಚಿದಂಬರಂ
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ