ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರಕ್ಕೆ ಕಡಿವಾಣ: ಶೇ.11.89ಕ್ಕೆ ಇಳಿತ  Search similar articles
PTI
ಸತತ ಒಂಭತ್ತು ವಾರಗಳ ಕಾಲ ಒಂದೇ ಸಮನೆ ಏರುಮುಖ ಕಂಡಿದ್ದ ಹಣದುಬ್ಬರ ದರವು ಜುಲೈ 12ಕ್ಕೆ ಅಂತ್ಯಗೊಂಡ ವಾರದಲ್ಲಿ ಕೊದಲೆಳೆಯ ಇಳಿಕೆ ಕಂಡಿದ್ದು ಶೇ.11.89 ದಾಖಲಾಗಿದೆ.

ಆಹಾರ ವಸ್ತುಗಳಾದ ಆಲೂಗಡ್ಡೆ, ಜೋಳ, ಸಮುದ್ರದ ಮೀನು ಮತ್ತು ಆಮದಿತ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ ಕಂಡಿದೆ.

ವಿಶ್ವಾಸಮತ ಗೊತ್ತುವಳಿಯ ಚರ್ಚೆಯ ವೇಳೆಗೆ ಲೋಕಸಭೆಯಲ್ಲಿ ಹಣದುಬ್ಬರದ ಏರಿಕೆಗಾಗಿ ಸರಕಾರ ಭಾರೀ ಟೀಕೆಯನ್ನು ಎದುರಿಸಿರುವ ಎರಡು ದಿವಸಗಳ ಬಳಿಕ ಹೊರಬಿದ್ದ ವರದಿಯು ಹಣದುಬ್ಬರದ ಪ್ರಮಾಣದಲ್ಲಿ 0.02 ಅಂಕಗಳ ಇಳಿಕೆಯ ವರದಿ ಮಾಡಿದೆ.

ನಾಗಾಲೋಟದ ಹಣದುಬ್ಬರದಿಂದಾಗಿ ಸರಕಾರವು ತೀವ್ರ ಟೀಕೆಗಳೆನ್ನೆದುರಿಸಿದ್ದು, ತೀವ್ರ ಸಂಕಷ್ಟಕ್ಕೆಸಿಲುಕಿತ್ತು. ಯುದ್ಧೋಪಾದಿಯಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಅದೀಗ ಫಲನೀಡಲು ಆರಂಭವಾದಂತಾಗಿದೆ.

ಮೇ.10ರಂದು ಕೊನೆಗೊಂಡ ವಾರದಲ್ಲಿ ಶೇ.7.82ಕ್ಕೇರಿದ್ದ ಹಣದುಬ್ಬರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಏರಿಕೆ ಬಳಿಕ ಜೂನ್ ತಿಂಗಳಲ್ಲಿ 11.05ಕ್ಕೇರಿತ್ತು. ಅದು ಮತ್ತಷ್ಟು ಏರಿಕೆ ಕಂಡು ಜುಲೈ 5ರ ವೇಳೆಗೆ 11.91ರ ಗರಿಷ್ಠ ಮಟ್ಟ ತಲುಪಿತ್ತು. ಕಳೆದ ವರ್ಷ ಇದೇ ವೇಳೆಗೆ ಹಣದುಬ್ಬರವು ಶೇ.4.76 ದಾಖಲಾಗಿತ್ತು.

ಆಲುಗಡ್ಡೆ, ಜೋಳ, ಸಮುದ್ರ ಆಹಾರ, ಚಹ ಮತ್ತು ಆಮದಿತ ಖಾದ್ಯ ತೈಲಗಳ ಬೆಲೆಇಳಿಕೆಯಿಂದಾಗಿ ಹಣದುಬ್ಬರದ ಏರಿಕೆ ಸ್ಥಗಿತಗೊಂಡಿದೆ ಎಂದು ಅಧಿಕೃತ ಅಂಕಿಅಂಶಗಳು ಹೇಳಿವೆ. ಇತರ ವಸ್ತುಳಾದ ಕಾಫಿ, ಹಣ್ಣುಗಳು, ತರಕಾರಿ, ಮಾಂಸ ಮತ್ತು ಉದ್ದು, ಹೆಸರು ಮುಂತಾದ ಧಾನ್ಯಗಳು ತುಟ್ಟಿಯಾಗಿಯೇ ಇದ್ದವು.
ಮತ್ತಷ್ಟು
ಶೈಕ್ಷಣಿಕ ಸಾಲಕ್ಕಾಗಿ ಸಹಾಯಧನ-ಅರ್ಜುನ್‌ಸಿಂಗ್
ಮುಕ್ತ ವ್ಯಾಪಾರದ ಮಾತುಕತೆ ಪೂರ್ಣ-ಕಮಲ್‌ನಾಥ್
ಚಿನ್ನದ ಬೇಡಿಕೆಯಲ್ಲಿ ಕುಸಿತ
ಹವಾಮಾನ ಉದ್ಯಮದಲ್ಲಿ ಮಹತ್ವದ ಪಾತ್ರ
ವಿಮೆ ಮಸೂದೆಗೆ ಒಮ್ಮತದ ನಿರ್ಧಾರ-ಚಿದಂಬರಂ
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ