ಮುಂಬೈ ತೈಲ ಕೇಂದ್ರದಲ್ಲಿ ಉಂಟಾದ ಸ್ಫೋಟದ ಹಿನ್ನೆಲೆಯಲ್ಲಿ ತೈಲ ಕೇಂದ್ರವನ್ನು ಮುಚ್ಚಲಾಗಿದ್ದರಿಂದ ಕಚ್ಚಾ ತೈಲ ಉತ್ಪಾದನೆಯಲ್ಲಿ ಶೇ 4.6ರಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ದೇಶಿಯ ಕಚ್ಚಾ ತೈಲ ಉತ್ಪಾದನೆ 2.64 ಮಿಲಿಯನ್ ಟನ್‌ಗಳಾಗಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ಕಚ್ಚಾ ತೈಲ ಉತ್ಪಾದನೆ 2.77 ಮಿಲಿಯನ್ ಟನ್‌ಗಳಾಗಿತ್ತು. ಪನ್ನಾ/ಮುಕ್ತಾ ತೈಲ ಕೇಂದ್ರದಲ್ಲಿ ನಡೆದ ಸ್ಫೋಟದಿಂದಾಗಿ ಒಂದು ತಿಂಗಳ ಕಾಲ ಕೇಂದ್ರವನ್ನು ಮುಚ್ಚಲಾಗಿತ್ತು ಎಂದು ಕೇಂದ್ರ ಪೆಟ್ರೋಲೀಯಂ ಸಚಿವಾಲಯ ಪ್ರಕಟಿಸಿದೆ.
17 ಸಾರ್ವಜನಿಕ ಸಂಸ್ಥೆಗಳು ಹಾಗೂ ಎರಡು ಖಾಸಗಿ ರಿಫೈನರಿಗಳು 13.65 ಮಿಲಿಯನ್‌ಟನ್ ಪೆಟ್ರೋಲೀಯಂ ಉತ್ಪಾದಿಸುತ್ತಿದ್ದು, ರಿಲಯನ್ಸ್ 3.19 ಮಿಲಿಯನ್ ಟನ್, ಎಸ್ಸಾರ್ ಆಯಿಲ್ 999.000 ಟನ್ ಪೆಟ್ರೋಲಿಯಂ ಉತ್ಪಾದಿಸುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಏಪ್ರಿಲ್-ಜೂನ್ ತಿಂಗಳಲ್ಲಿ ಪೆಟ್ರೋಲಿಯಂ ಉತ್ಪಾದನೆಯಲ್ಲಿ ಶೇ. 3.3ರಷ್ಟು ಹೆಚ್ಚಳವಾಗಿದ್ದು, ರಿಲಯನ್ಸ್ ಶೇ.2.8ರಷ್ಟು ಹಾಗೂ ಎಸ್ಸಾರ್ 80.6ರಷ್ಟು ಹೆಚ್ಚಳ ಕಂಡಿವೆ.
|