ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚಿನ ಬಡ್ಡಿದರ ವಿಧಿಸುತ್ತಿರುವುದನ್ನು ತಡೆಯಲು ದೇಶದಲ್ಲಿರುವ ಲಕ್ಷಾಂತರ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆರವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್‌ಗಳಿಗೆ ನಿಯಮಗಳನ್ನು ಘೋಷಿಸಿ ನಿರ್ದೇಶನ ನೀಡಿದೆ.
ಗ್ರಾಹಕರ ಕ್ರೆಡಿಟ್ ಕಾರ್ಡ್ ಸಾಲದ ಮೇಲೆ ಹೆಚ್ಚಿನ ಬಡ್ಡಿದರವನ್ನು ಹೇರಬಾರದು. ಬಡ್ಡಿಯ ಮೇಲಿನ ನಿಯಂತ್ರಣ ಅಗತ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.
"ಕ್ರೆಡಿಟ್ ಕಾರ್ಡ್ ಜೊತೆಯಲ್ಲಿ ಸಣ್ಣ ಪ್ರಮಾಣದ ಸಾಲಗಳ ಮೇಲೆ ಕೂಡಾ ಬಡ್ಡಿದರ ಮಿತಿಯನ್ನು ವಿಧಿಸಬೇಕು. ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಹಾಯಕವಾಗಲಿದೆ. ಕ್ರೆಡಿಟ್ ಕಾರ್ಡ್ ಬಳಸುವ ಬ್ಯಾಂಕ್‌ಗಳಿಗೆ ನೂತನ ಮಾರ್ಗದರ್ಶಿ ಸೂತ್ರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದು, ಬರಹ ರೂಪದಲ್ಲಿ ಕಾರಣಗಳನ್ನು ನೀಡದೆ ಗ್ರಾಹಕರ ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ತಿರಸ್ಕರಿಸಬಾರು ಎಂದು ಹೇಳಿದೆ.
ಗ್ರಾಹಕರಿಗೆ ಅನಗತ್ಯವಾದ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದಲ್ಲಿ ಅದರ ದುರ್ಬಳಕೆಗೆ ಬ್ಯಾಂಕ್ ನೇರವಾಗಿ ಹೊಣೆಯಾಗುತ್ತದೆ. ಇದರಲ್ಲಿ ಗ್ರಾಹಕರನ್ನು ಹೊಣೆ ಮಾಡಲಾಗದು ಎಂದು ನಿಯಮಗಳಲ್ಲಿ ಪ್ರಕಟಿಸಿದೆ.
ಬ್ಯಾಂಕ್‌ಗಳು, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಲ್‌ಗಳನ್ನು ಕಳುಹಿಸುವಾಗ ವಿಳಂಬ ಸಲ್ಲದು. ಹಣಕಟ್ಟಲು 15 ದಿನಗಳಾದರೂ ಅವಕಾಶ ನೀಡುವುದು ಅಗತ್ಯ. ಆನಂತರವಷ್ಟೆ ಬಡ್ಡಿ ವಿಧಿಸಬೇಕು ಜೊತೆಗೆ ಮಾಸಿಕ ಸ್ಟೇಟ್‌ಮೆಂಟ್‌ಗಳಿಗೆ ಸ್ವೀಕೃತಿಯನ್ನು ಗ್ರಾಹಕರ ಕಡೆಯಿಂದ ಪಡೆಯುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಕ್ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ .
|