ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿಯಿಂದ ಎಂ800ಯುನಿಕ್‌ ಕಾರ್ ಬಿಡುಗಡೆ  Search similar articles
ದೇಶದ ಕಾರ್‌‌ ಉತ್ಪಾದನೆಯಲ್ಲಿ ಮೂಂಚೂಣಿಯಲ್ಲಿರುಪ ಮಾರುತಿ ಸುಝುಕಿ ಕಂಪೆನಿ ಎಂ800 ಯುನಿಕ್‌ ಹೆಸರಿನ ನೂತನ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಹಳೆ ಮಾಡೆಲ್‌ ಎಂ 800 ಕಾರನ್ನು ಅಭಿವೃದ್ಧಿಪಡಿಸಿ ಅತ್ಯಾಧುನಿಕವಾಗಿ ಸಿದ್ಧಪಡಿಸಲಾದ ಎಂ800 ಯುನಿಕ್ ಕಾರನ್ನು ಪಡೆಯಲು 5,200 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ಕಂಪೆನಿಯ ಎಂ 800 ಎಸಿ ಮಾಡೆಲ್ ಕಾರಿನ ದರ 2,11,176 ರೂ.ಗಳಾಗಿದ್ದು 2,16,376 ರೂ.ಗಳನ್ನು ಪಾವತಿಸಿದಲ್ಲಿ ಎಂ800 ಯುನಿಕ್ ಕಾರನ್ನು ಪಡೆಯಬಹುದಾಗಿದೆ.

ಮಾರುತಿ ಸುಝುಕಿ ಕಾರನ್ನು ದೇಶಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದ್ದು, ಮುಂಬರುವ ಕೆಲ ದಿನಗಳಲ್ಲಿ ಗ್ರಾಹಕರು ಕಾರುಗಳನ್ನು ಖರೀದಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.

ಎಂ800 ಯುನಿಕ್ ಮಾಡೆಲ್ ಕಾರಿನಲ್ಲಿ ಫ್ಯಾಬ್ರಿಕ್ ಪ್ಯಾಚ್, ಡೋರ್ ವಿಶೇಷತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಬಡ್ಡಿ ದರ ಹೆಚ್ಚಳದಿಂದ ಲಾಭದಲ್ಲಿ ಕೊರತೆ-ಬನ್ಸಾಲ್
ಕ್ರೆಡಿಟ್ ಕಾರ್ಡ್‌ ಸಾಲಕ್ಕೆ ಬಡ್ಡಿ ಮಿತಿ -ಆರ್‌ಬಿಐ
ದೇಶಿಯ ಕಚ್ಚಾತೈಲ ಉತ್ಪಾದನೆಯಲ್ಲಿ ಕುಸಿತ
ಹಣದುಬ್ಬರಕ್ಕೆ ಕಡಿವಾಣ: ಶೇ.11.89ಕ್ಕೆ ಇಳಿತ
ಶೈಕ್ಷಣಿಕ ಸಾಲಕ್ಕಾಗಿ ಸಹಾಯಧನ-ಅರ್ಜುನ್‌ಸಿಂಗ್
ಮುಕ್ತ ವ್ಯಾಪಾರದ ಮಾತುಕತೆ ಪೂರ್ಣ-ಕಮಲ್‌ನಾಥ್