ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಐ ಯೋಜನೆಗೆ ಭಾರತದ ಸಹಭಾಗಿತ್ವ ಅಗತ್ಯ  Search similar articles
ಇರಾನ್- ಪಾಕಿಸ್ತಾನ- ಭಾರತ ದೇಶಗಳ ಮಹತ್ವದ ಬಹುಬಿಲಿಯನ್ ಡಾಲರ್ ವೆಚ್ಚದ ಯೋಜನೆಯಾದ ಅನಿಲ ಖೊಳವೆ ಯೋಜನೆಯಲ್ಲಿ ಭಾರತ ಪಾಲ್ಗೊಂಡಲ್ಲಿ ಹೆಚ್ಚಿನ ಆರ್ಥಿಕತೆ ವ್ಯವಹಾರಕ್ಕೆ ಆದ್ಯತೆ ದೊರೆಯಲಿದೆ ಎಂದು ಪಾಕ್ ವಿದೇಶಾಂಗ ಸಚಿವ ಖುರೇಶಿ ಹೇಳಿದ್ದಾರೆ.

ಭಾರತ ತ್ರೀ ದೇಶಗಳ ಅನಿಲ ಕೊಳವೆ ಯೋಜನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದಾಗ ಧಾರಣೆಯ ಸ್ಥಿರತೆಗೆ ಪ್ರೋತ್ಸಾಹ ದೊರೆಯಲಿದೆ ಎಂದು ಇಂಟರ್‌ನ್ಯಾಷನಲ್ ಇನ್‌ಸ್ಟೂಟ್ ಫಾರ್ ಸ್ಟ್ರಾಟಿಜಿಕ್ ಸ್ಟಡೀಸ್ ಆಯೋಜಿಸಿದ ಸಮಾರಂಭದಲ್ಲಿ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ಹಾಗೂ ಭಾರತ ದೇಶಗಳು ಇಂಧನ ಕೊರತೆಯನ್ನು ಎದುರಿಸುತ್ತಿದ್ದು ಅನಿಲ ಕೊಳವೆ ಯೋಜನೆಯಿಂದ ಉಭಯ ದೇಶಗಳಿಗೆ ಲಾಭವಾಗಲಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳು ಇಂಧನ ಕೊರತೆಯನ್ನು ಎದುರಿಸುತ್ತಿದ್ದು , ಜಾಗತಿಕ ಮಟ್ಟದಲ್ಲಿ ಇಂಧನ ಕೊರತೆಯಿಂದ ಕೈಗಾರಿಕೆಗೆ ಹಾಗೂ ಕೃಷಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಅನಿಲ ಕೊಳವೆ ಯೋಜನೆಯಿಂದ ಭಾರತ, ಚೀನಾ, ಪಾಕಿಸ್ತಾನ ದೇಶಗಳಿಗೆ ಇಂಧನ ಕೊರತೆಯನ್ನು ನೀಗಲಿದ್ದು, ಇಂಧನದ ಮುಖ್ಯ ಕೇಂದ್ರಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಖುರೇಶಿ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಮಾರುತಿಯಿಂದ ಎಂ800ಯುನಿಕ್‌ ಕಾರ್ ಬಿಡುಗಡೆ
ಬಡ್ಡಿ ದರ ಹೆಚ್ಚಳದಿಂದ ಲಾಭದಲ್ಲಿ ಕೊರತೆ-ಬನ್ಸಾಲ್
ಕ್ರೆಡಿಟ್ ಕಾರ್ಡ್‌ ಸಾಲಕ್ಕೆ ಬಡ್ಡಿ ಮಿತಿ - ಆರ್‌ಬಿಐ
ದೇಶಿಯ ಕಚ್ಚಾತೈಲ ಉತ್ಪಾದನೆಯಲ್ಲಿ ಕುಸಿತ
ಹಣದುಬ್ಬರಕ್ಕೆ ಕಡಿವಾಣ: ಶೇ.11.89ಕ್ಕೆ ಇಳಿತ
ಶೈಕ್ಷಣಿಕ ಸಾಲಕ್ಕಾಗಿ ಸಹಾಯಧನ-ಅರ್ಜುನ್‌ಸಿಂಗ್