ಸರಕಾರಿ ವಲಯದ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ತ್ರೈಮಾಸಿಕ ನಿವ್ವಳ ಆದಾಯದಲ್ಲಿ ಶೇ.15.1ರಷ್ಟು ಏರಿಕೆಯನ್ನು ಕಂಡಿದೆ.
ಮಾರ್ಚ್ ತಿಂಗಳಲ್ಲಿ ಬ್ಯಾಂಕಿನ ಹಕ್ಕು ವಿತರಣೆಯು 4.1 ಶತಕೋಟಿಗಳಿಗೇರಿದ್ದು, ಏಪ್ರಿಲ್ -ಜೂನ್ ತಿಂಗಳಲ್ಲಿನ ನಿವ್ವಳ ಆದಾಯವು 16.41 ಶತಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಕಳೆದ ವರ್ಷದ 14.26 ಶತಕೋಟಿ ರೂಪಾಯಿಗಿಂತ ಹೆಚ್ಚು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ರಾಯಿಟರ್ ಸಮೀಕ್ಷೆಯಲ್ಲಿ ಬ್ಯಾಂಕ್ ಆದಾಯವು 14.67 ಶತಕೋಟಿ ರೂಪಾಯಿಗಳ ಏರಿಕೆಯ ಮುನ್ಸೂಚನೆಯನ್ನು ನೀಡಿತ್ತು.
ದೇಶದಾದ್ಯಂತ ಸುಮಾರು 10,000 ಶಾಖೆಗಳನ್ನು ಹೊಂದಿರುವ ಸ್ಟೇಟ್‌ಬ್ಯಾಂಕ್, ದೇಶದ ಇತರ ಬ್ಯಾಂಕುಗಳಿಗಿಂತ ಅತಿ ಕಡಿಮೆ ಹೂಡಿಕಾ ವೆಚ್ಚವನ್ನು ಹೊಂದಿದೆ.
ಜೂನ್ ತಿಂಗಳಲ್ಲಿ ಸ್ಟೇಟ್ ಬ್ಯಾಂಕ್‌ನ ಶೇರುಗಳು ಶೇ.31ರಷ್ಟು ಇಳಿಕೆಗೊಂಡಿದ್ದವು.
|