ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು  Search similar articles
ಜಾಗತಿಕ ವ್ಯಾಪಾರವನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ಡಬ್ಲ್ಯುಟಿಒ ಒಪ್ಪಂದಕ್ಕೆ ಸಹಮತ ರೂಪಿಸಲು ನಡೆಯುತ್ತಿರುವ ಮಾತುಕತೆಯಲ್ಲಿ, ವ್ಯಾಪಾರ ಸಚಿವರುಗಳು 'ತೀರಾ ವಿಳಂಬ' ಗತಿಯ ಪ್ರಗತಿ ಸಾಧಿಸುವ ಮೂಲಕ ಭಾರತವು ದೂಷಣೆಗೆ ಒಳಗಾಗಬೇಕಾಗಿಬಂದಿದೆ. "ನಾನು ಮಾತುಕತೆಯನ್ನು ಮುರಿಯುತ್ತಿದ್ದೇನೆ ಎಂದು ಅವರು (ಅಭಿವೃದ್ಧಿಹೊಂದಿದ ರಾಷ್ಟ್ರಗಳು) ಆರೋಪಿಸುತ್ತಿದ್ದಾರೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕಮಲ್ ನಾಥ್ ಹೇಳಿದ್ದಾರೆ.

ಮಾತುಕತೆಯನ್ನು ಮುಂದುವರಿಸಲು ಭಾರತವು ತೊಡಕಾಗಿ ಪರಿಣಮಿಸಿದ್ದು, ಇದು ಮಾತುಕತೆಯು ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದು ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ, ಇಯು ಮತ್ತು ಕೆನಡಾಗಳು ಭಾರತವನ್ನು ದೂರಿವೆ.

ಯುಪಿಎ ಸರಕಾರವು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ನಂತರ ತಾನು ಜಿನೇವಾಗೆ ತೆರಳಿದಾಗ ತನ್ನ ಸಹೋದ್ಯೋಗಿಗಳು ಮಾತುಕತೆಯಲ್ಲಿ ಮುನ್ನಡೆಯನ್ನು ನಿರೀಕ್ಷಿಸಿದ್ದರು ಎಂದು ಕಮಲನಾಥ್ ತಿಳಿಸಿದ್ದಾರೆ. 'ನಾವು ಮಾತುಕತೆಯಲ್ಲಿ ಸರಿಯಾಗಿಯೇ ಮುಂದುವರಿಯುತ್ತಿದ್ದೆವು, ನಿಮ್ಮ ಆಗಮನದ ನಂತರ ಈ ಮಾತುಕತೆಯಲ್ಲಿ ಹಿನ್ನಡೆ ಉಂಟಾಗಿದೆ' ಎಂದು ಅವರು ಆರೋಪಿಸುತ್ತಿರುವುದಾಗಿ ನಾಥ್ ಹೇಳಿದ್ದಾರೆ.
ಮತ್ತಷ್ಟು
ಎಸ್‌ಬಿಐ ತ್ರೈಮಾಸಿಕ ಆದಾಯ ಹೆಚ್ಚಳ
ಐಸಿಐಸಿಐ: ನಿವ್ವಳ ಆದಾಯ ಕುಸಿತ
ಐಪಿಐ ಯೋಜನೆಗೆ ಭಾರತದ ಸಹಭಾಗಿತ್ವ ಅಗತ್ಯ
ಮಾರುತಿಯಿಂದ ಎಂ800ಯುನಿಕ್‌ ಕಾರ್ ಬಿಡುಗಡೆ
ಬಡ್ಡಿ ದರ ಹೆಚ್ಚಳದಿಂದ ಲಾಭದಲ್ಲಿ ಕೊರತೆ-ಬನ್ಸಾಲ್
ಕ್ರೆಡಿಟ್ ಕಾರ್ಡ್‌ ಸಾಲಕ್ಕೆ ಬಡ್ಡಿ ಮಿತಿ - ಆರ್‌ಬಿಐ