ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್  Search similar articles
ನೂತನ ಜಾಗತಿಕ ವ್ಯಾಪಾರ ಒಪ್ಪಂದವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲ ಆಶಾದಾಯಕ ಬೆಳವಣಿಗೆಗಳು ಆಗಿದ್ದು, ಅಭಿವೃದ್ದಿ ಹೊಂದುತ್ತಿರುವ ಮತ್ತು ಅಭಿವೃದ್ದಿ ಹೊಂದಿದ ರಾಷ್ಟ್ರಗಳ ನಡುವಿನ ಡಬ್ಲುಟಿಎ ಕೆಲ ವಿಚಾರಗಳಲ್ಲಿ ಸಹಮತ ಉಂಟಾಗಿದೆ ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಕಮಲ್‌ನಾಥ್ ಅವರು ಹೇಳಿದ್ದಾರೆ.


ಡಬ್ಲುಟಿಒದ 35 ರಾಷ್ಟ್ರಗಳ ಸಚಿವರೊಂದಿಗೆ ಜಿನಿವಾದಲ್ಲಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಡುತ್ತಿದ್ದ ಕಮಲ್‌ನಾಥ್ ಅವರು ವ್ಯಾಪಾರ ವಹಿವಾಟು ವೃದ್ದಿಯಾಗಬಹುದಾದ ವಲಯಗಳಲ್ಲಿ ಅದರಲ್ಲೂ ಬಡತನ ನಿವಾರಣೆ, ರಕ್ಷಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ಸಹಮತ ಸದಸ್ಯ ರಾಷ್ಟ್ರಗಳ ನಡುವೆ ಮೂಡಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನಿಸಿಕೆ ವ್ಯಕ್ತಪಡಿಸಿರುವ ಯುರೋಪಿಯನ್ ಟ್ರೇಡ್ ಕಮಿಷನರ್ ಪೀಟರ್ ಮಂಡೇಲ್ಸನ್ ಅವರು ಮಾತುಕತೆಯನ್ನು ಗಮನಿಸಿದರೆ ಪರಿಸ್ಥಿತಿ ಸುಧಾರಿಸುತ್ತಿದ್ದು, ಮಾತುಕತೆಯಲ್ಲಿ ಒಪ್ಪಂದ ಪರಿಪೂರ್ಣವಾಗಿಲ್ಲ ಎಂಬ ಅಭಿಪ್ರಾಯ ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ್ದು, ವಾಸ್ತವಿಕವಾಗಿ ಇದು ಜಾಗತಿಕ ಅರ್ಥವ್ಯವಸ್ಥೆಯ ಅಭಿವೃದ್ದಿಗೆ ಪೂರಕ ಎಂದು ಬಣ್ಣಿಸಿದ್ದಾರೆ.

ಕಳೆದ ಒಂದು ವಾರದಿಂದ 35 ರಾಷ್ಟ್ರಗಳ ಪ್ರತಿನಿಧಿಗಳು ಸಬ್ಸಿಡಿ ಮತ್ತು ಆಮದು ತೆರಿಗೆ ಕಡಿತಗೊಳಿಸಿ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವತ್ತ ವಿಚಾರ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಪ್ರಾರಂಭವಾದ ದೋಹಾ ಸುತ್ತಿನ ಮಾತುಕತೆಯಲ್ಲಿ ಕೃಷಿ ಮತ್ತು ಉತ್ಪಾದಿತ ವಸ್ತುಗಳ ಜಾಗತಿಕ ವಹಿವಾಟಿಗೆ ಸಂಬಂಧಿಸಿದಂತೆ ಅಭಿವೃದ್ದಿ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ತಲೆದೊರಿದ ನಂತರ ದೋಹಾ ಸುತ್ತಿನ ಮಾತುಕತೆಯಲ್ಲಿ ಪ್ರಗತಿ ಕಂಡು ಬಂದಿಲ್ಲ.
ಮತ್ತಷ್ಟು
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು
ಎಸ್‌ಬಿಐ ತ್ರೈಮಾಸಿಕ ಆದಾಯ ಹೆಚ್ಚಳ
ಐಸಿಐಸಿಐ: ನಿವ್ವಳ ಆದಾಯ ಕುಸಿತ
ಐಪಿಐ ಯೋಜನೆಗೆ ಭಾರತದ ಸಹಭಾಗಿತ್ವ ಅಗತ್ಯ
ಮಾರುತಿಯಿಂದ ಎಂ800ಯುನಿಕ್‌ ಕಾರ್ ಬಿಡುಗಡೆ