ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ  Search similar articles
ವಾರ್ಷಿಕವಾಗಿ ನಾಲ್ಕು ಕೋಟಿ ಉದ್ಯೋಗಿಗಳು ವಂತಿಗೆ ನೀಡುವ 25 ಸಾವಿರ ಕೋಟಿ ರೂಗಳ ಸಾರ್ವಜನಿಕ ನಿಧಿ ವ್ಯವಹಾರವನ್ನು ನಿರ್ವಹಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಖಾಸಗಿ ವಲಯದ ಬೃಹತ್ ಬ್ಯಾಂಕುಗಳಾದ ಎಚ್ಎಸ್‌ಬಿಸಿ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಬ್ಯಾಂಕ್‌‌ಗಳನ್ನು ಪಟ್ಟಿ ಮಾಡಲಾಗಿದೆ.

ಎಚ್ಎಸ್‌ಬಿಸಿಸ ಐಸಿಐಸಿಐ ಪ್ರುಡೆನ್ಶಿಯಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಮೂರು ಆಸ್ತಿ ನಿರ್ವಹಣಾ ಕಂಪನಿಗಳು ಹಣಕಾಸು ಸುತ್ತಿನ ಬಿಡ್‌ನಲ್ಲಿ ಅರ್ಹತೆ ಗಳಿಸಿವೆ ಎಂದು ಸಾರ್ಪಜನಿಕ ನಿಧಿ ನಿಗಮದ ಹಣಕಾಸು ಮತ್ತು ಹೂಡಿಕೆ ಸಮಿತಿಯ ಸದಸ್ಯರೋರ್ವರು ಮಾಹಿತಿ ನೀಡಿದ್ದಾರೆ.

ಹಣಕಾಸು ಬಿಡ್ ಮುನ್ನ ರಿಲಯನ್ಸ್, ಬಿರ್ಲಾ ಸನ್ ಲೈಫ್, ಎಚ್‌ಡಿಎಫ್‌ಸಿ ಹಣಕಾಸು ಸಂಸ್ಥೆಗಳು ತಾಂತ್ರಿಕ ಸುತ್ತಿನಲ್ಲಿ ಅರ್ಹತೆ ಗಳಿಸಿದ್ದವು, ಎಚ್ಎಸ್‌ಬಿಸಿ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಕಂಪನಿಗಳು ಅತಿ ಕಡಿಮೆ ಶುಲ್ಕವನ್ನು ಬಿಡ್‍‌ನಲ್ಲಿ ನಮೂದಿಸಿದ್ದವು. ಇದೇ ಮೊತ್ತವನ್ನು ಎಸ್‌ಬಿಐ ಮತ್ತು ರಿಲಯನ್ಸ್ ನಮೂದಿಸಿದ್ದರೂ ತಾಂತ್ರಿಕ ಸುತ್ತಿನಲ್ಲಿ ಎಸ್‌ಬಿಐ ಹೆಚ್ಚು ಅಂಕಗಳಿಸಿದ್ದರಿಂದ ಹಣಕಾಸು ಸುತ್ತಿನಲ್ಲಿಯೂ ಅರ್ಹತೆ ಸಾಧಿಸಿದೆ.
ಮತ್ತಷ್ಟು
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು
ಎಸ್‌ಬಿಐ ತ್ರೈಮಾಸಿಕ ಆದಾಯ ಹೆಚ್ಚಳ
ಐಸಿಐಸಿಐ: ನಿವ್ವಳ ಆದಾಯ ಕುಸಿತ
ಐಪಿಐ ಯೋಜನೆಗೆ ಭಾರತದ ಸಹಭಾಗಿತ್ವ ಅಗತ್ಯ