ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಖಾದ್ಯತೈಲ  Search similar articles
ಆಂಧ್ರಪ್ರದೇಶದಲ್ಲಿ ಪಡಿತರ ವಿತರಣೆ ಅಂಗಡಿಗಳ ಮೂಲಕ ಖಾದ್ಯ ತೈಲ ಮಾರಾಟವು ಸೋಮವಾರ ಪ್ರಾರಂಭಗೊಳ್ಳಲಿದೆ.

ಆಂಧ್ರಪ್ರದೇಶದ ತಂದೂರ್ ಮತ್ತು ರಂಗರೆಡ್ಡಿ ಜಿಲ್ಲೆಗಳಲ್ಲಿ ಸಾಮಾನ್ಯ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಘೋಷಿಸಲದ ಈ ಯೋಜನೆಯನ್ನು ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಉದ್ಘಾಟಿಸಲಿದ್ದಾರೆ.

ಈ ಯೋಜನೆಯಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಮತ್ತು ಅಂತ್ಯೋದಯ ಅನ್ನ ಯೋಜನಾ(ಎಎವೈ) ವಿಭಾದಲ್ಲಿ ಬರುವ ಕುಟುಂಬಗಳಿಗೆ ಒಂದು ಕೆ.ಜಿ ಖಾದ್ಯ ತೈಲವನ್ನು ವಿತರಿಸಲಾಗುವುದು.

ಜನರಿಗೆ ಪೂರೈಕೆ ಮಾಡುವ ಅಕ್ಕಿ, ಗೋಧಿ ಮತ್ತು ಸಕ್ಕರೆ ಮುಂತಾದ ಉತ್ಪನ್ನಗಳಂತೆ, ಖಾದ್ಯ ತೈಲಕ್ಕೆ ಕೇಂದ್ರವು ನಿರ್ದಿಷ್ಟ ಬೆಲೆಯನ್ನು ನಿಗದಿಪಡಿಸಿಲ್ಲ.

ಆಮದು ವೆಚ್ಚದ ಆಧಾರದಲ್ಲಿ ಪ್ರತಿ ಕೆ.ಜಿಗೆ 15 ರೂಪಾಯಿ ಸಹಾಯಧನವನ್ನು ನೀಡಲು ಸರಕಾರವು ಒಪ್ಪಿಗೆ ಸೂಚಿಸಿದೆ.

ಸರಕಾರಿ ವಲಯದ ವ್ಯಾಪಾರ ಕಂಪನಿಗಳಾದ ಎಸ್‌ಟಿಸಿ, ಪಿಇಸಿ ಮತ್ತು ಎಎಟಿಸಿಗಳಿಗೆ 2008-09ರ ಹಣಕಾಸು ವರ್ಷದಲ್ಲಿ ಸುಮಾರು ಹತ್ತು ಲಕ್ಷ ಟನ್ ಖಾದ್ಯತೈಲ ಆಮದು ಮಾಡಿಕೊಳ್ಳಲು ಕೇಂದ್ರವು ಸೂಚಿಸಿದೆ.
ಮತ್ತಷ್ಟು
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು