ರಿಲಯನ್ಸ್ ಅನಿಲ್ ಧೀರೂಬಾಯ್ ಕಂಪನಿಯ ಭಾಗವಾಗಿರುವ ಮತ್ತು ಪ್ರಮುಖ ಮನರಂಜನಾ ಸಂಸ್ಥೆಯಾಗಿರುವ ಆಡ್‌ಲ್ಯಾಬ್ ಫಿಲ್ಮ್ಸ್, 1085 ಮಂದಿ ಸಾಮರ್ಥ್ಯವಿರುವ ನಾಲ್ಕು ಪರದೆ ಸಿನಿಮಾ ಮಂದಿರವನ್ನು ಮಂಬೈನ ಕಾರ್ಗರ್‌ನ ಲಿಟಲ್ ವರ್ಲ್ಡ್ ಮಾಲ್‌ನ ಪ್ರಾರಂಭಿಸಿದೆ.
ನೂತನ ಆಡ್‌ಲ್ಯಾಬ್ಸ್, ಹಿರಾನಂದನಿ ಕಾಂಪ್ಲೆಕ್ಸ್ ಮತ್ತು ಪಾಮ್‌ಬೀಚ್ ರಸ್ತೆಗೆ ಸಮೀಪವಿದ್ದು, ಎರಡೂ ಕೂಡಾ ವಸತಿ ಪ್ರದೇಶಗಳಾಗಿವೆ. ಅಲ್ಲದೆ, ಅನೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಕೂಡಾ ಇದರ ಸಮೀಪದಲ್ಲೇ ಇವೆ ಎಂದು ಆಡ್‌ಲ್ಯಾಬ್ ಸಿನೇಮಾದ ಸಿಒಒ ತುಶಾರ್ ದಿಂಗ್ರಾ ತಿಳಿಸಿದ್ದಾರೆ.
ವಿಸ್ತೃತ ವೀಕ್ಷಣೆ, ಡಿಟಿಎಸ್ ಧ್ವನಿ ಮತ್ತು ಕ್ಸೆನಾನ್ ಪ್ರೊಜೆಕ್ಷನ್ ವಿಧಾನವನ್ನು ನೂತನ ಆಡ್‌ಲ್ಯಾಬ್ಸ್‌ನಲ್ಲಿ ಅಳವಡಿಸಲಿದ್ದು, ಇಂಟರ್ನೆಟ್ ಮತ್ತು ಟೆಲಿಫೋನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನೂ ಹೊಂದಿದೆ.
ಆಡ್‌ಲ್ಯಾಬ್ ಸಿನೆಮಾವು ಭಾರತದ ಅತಿ ದೊಡ್ಡ ಸಿನೆಮಾ ಆಗಿದ್ದು, ದೇಶದಾದ್ಯಂತ 67 ಕಡೆಗಳಲ್ಲಿ ಸುಮಾರು 175 ಸಿನೇಮಾ ಮಂದಿರಗಳನ್ನು ಹೊಂದಿದೆ.
|