ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ  Search similar articles
ಶೇ.12ರ ಸಮೀಪದಲ್ಲಿರುವ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮಂಗಳವಾರ ನಡೆಸಲಿರುವ ಹಣಕಾಸು ವಿಮರ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿದರಗಳನ್ನು ಶೇ.0.25ರಿಂದ 0.50 ಅಂಶಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರವನ್ನು ಶೇ.8.50ರಷ್ಟು ಹೆಚ್ಚಳಗೊಳಿಸಲಿದೆ ಎಂದು ಹನ್ನೊಂದು ವಿಶ್ಲೇಷಕರಲ್ಲಿ ಏಳು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರೊಂದಿಗೆ ಹಣದುಬ್ಬರ ಏರಿಕೆಯ ಭೀತಿಯು ಉಳಿದುಕೊಂಡಿದ್ದು, ಇದನ್ನು ಶಮನಮಾಡುವ ನಿಟ್ಟಿನಲ್ಲಿ ಆರ್‌ಬಿಐ ಕಠಿಣ ಹಣಕಾಸು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಮುಖ ಆರ್ಥಿಕತಜ್ಞ ಸೋನಾಲ್ ವರ್ಮ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ರೇಪೋ ದರವನ್ನು 75 ಅಂಶಗಳಷ್ಟು ಮತ್ತು ನಗದು ಮೀಸಲು ಪ್ರಮಾಣವನ್ನು 50 ಅಂಶಗಳಷ್ಟು ಏರಿಕೆಗೊಳಿಸಿತ್ತು.
ಮತ್ತಷ್ಟು
ಲಿಟಲ್ ವರ್ಲ್ಡ್ ಮಾಲ್‌ನಲ್ಲಿ ಆಡ್‌ಲ್ಯಾಬ್ ಸಿನೇಮಾ
ಕೆರೆಗಳ ಅಭಿವೃದ್ಧಿಗೆ ಕೇಂದ್ರ ಚಿಂತನೆ
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಖಾದ್ಯತೈಲ
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ