ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ? Search similar articles
ಅಮೆರಿಕ, ಭಾರತ ಮತ್ತು ಬ್ರೆಜಿಲ್ ರಾಷ್ಟ್ರಗಳ ನಡುವಿನ ಪರಸ್ಪರ ದೂಷಣೆಯ ಫಲವಾಗಿ, ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ) ಮಾತುಕತೆಯು ಮುರಿದು ಬೀಳುವ ಹಂತದಲ್ಲಿದೆ. ಆಮದು ಪ್ರವಾಹಗಳ ಕುರಿತಾದ ಸುರಕ್ಷತೆ, ಅಮೆರಿಕ ಮತ್ತು ಯುರೋಪ್ ಒಕ್ಕೂಟದ ಶೂನ್ಯ ಆಮದು ಸುಂಕವನ್ನು ಬಯಸುವ ಆಟೋಮೊಬೈಲ್, ಕೆಮಿಕಲ್ ಮತ್ತು ಜವಳಿ ಕ್ಷೇತ್ರಗಳು ಹಾಗೂ ಅಮೆರಿಕದಿಂದ ಹತ್ತಿ ಆಮದು ಮೇಲಿನ ಸಬ್ಸಿಡಿ ಇಳಿಕೆ ಮುಂತಾದ ಬೇಡಿಕೆಗಳು ಈಡೇರಿದಲ್ಲಿ ಮಾತ್ರವೇ ಒಪ್ಪಂದ ಮುಂದುವರಿಯುವ ಸಾಧ್ಯತೆ ಇದೆ.

ಡಬ್ಲ್ಯೂಟಿಒ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಾಯಂಕಾಲದ ದೋಹಾ ಸುತ್ತಿನ ಅಧಿವೇಶನದ ವೇಳೆ ಮಾತುಕತೆಯು ಮರುಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

ಮಾತುಕತೆಯಲ್ಲಿ ಏಳು ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಅದರಲ್ಲಿ ಭಾರತವೂ ಒಂದು. ಮಾತುಕತೆಯಲ್ಲಿನ ಈ ನಿರ್ಣಯಗಳಿಗೆ ಭಾರತವು ಒಪ್ಪಿಗೆ ಸೂಚಿಸುವುದಿಲ್ಲ ಮತ್ತು ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲನಾಥ್ ತಿಳಿಸಿದ್ದಾರೆ.

"ನಾವೆಲ್ಲರೂ ಕೊಡುಗೆ ನೀಡುವ ಅವಶ್ಯಕತೆ ಇದೆ. ಪ್ರಾತಿನಿಧ್ಯದ ನಾಯಕತ್ವ ಸಮೂಹದಲ್ಲಿ ಏಳರಲ್ಲಿ ಆರು ಬಹಳ ದುರ್ಬಲ ಸಮತೋಲನ ಹೊಂದಿದೆ. ಏಕೆಂದರೆ ಪ್ರತಿಯೊಬ್ಬರೂ ವಿಸ್ತರಿಸಬೇಕಾಗಿದೆ, ಪ್ರತಿಯೊಬ್ಬರೂ ಕೊಡುಗೆ ನೀಡಬೇಕಾಗಿದೆ" ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ ಸುಸಾನ್ ಸ್ಕ್ವಾಬ್ ಹೇಳಿದ್ದಾರೆ.

ಒಂದು ದೇಶವು ಮೂಲ ಒಪ್ಪಂದದಿಂದಲೇ ದೂರ ಸರಿದರೆ, ಉಳಿದ ರಾಷ್ಟ್ರಗಳು ಬೇರೆ ದೇಶಗಳಿಗೆ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ದೂರ ಸರಿಯುತ್ತಿವೆ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ ಸುಸಾನ್ ಸ್ಕ್ವಾಬ್ ಇದೇ ವೇಳೆ ಹೇಳಿದ್ದಾರೆ.
ಮತ್ತಷ್ಟು
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ
ಲಿಟಲ್ ವರ್ಲ್ಡ್ ಮಾಲ್‌ನಲ್ಲಿ ಆಡ್‌ಲ್ಯಾಬ್ ಸಿನೇಮಾ
ಕೆರೆಗಳ ಅಭಿವೃದ್ಧಿಗೆ ಕೇಂದ್ರ ಚಿಂತನೆ
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಖಾದ್ಯತೈಲ
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ