ಶೇ.12ರ ಸಮೀಪವಿರುವ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿದರವನ್ನು 50 ಬೇಸಿಸ್ ಅಂಶಗಳಷ್ಟು ಹೆಚ್ಚಳಗೊಳಿಸಿದ್ದು, ಈ ಮೂಲಕ ರೇಪೋದರವು ಏಳುವರ್ಷಗಳಲ್ಲೇ ಅತ್ಯಧಿಕ ಮಟ್ಟ ಶೇ.9.0ಕ್ಕೆ ಏರಿದೆ.
ಬ್ಯಾಂಕಿಂಗ್ ಪದ್ಧತಿಯಲ್ಲಿ ಅಧಿಕ ಹಣ ಉಳಿಕೆಯನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ನಗದು ಮೀಸಲು ಪ್ರಮಾಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ 25 ಬೇಸಿಸ್ ಅಂಶಗಳಷ್ಟು ಹೆಚ್ಚಳಗೊಳಿಸಿದೆ.
ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತನ್ನ ಹಣಕಾಸು ನೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಗಿ ನಿಲುವನ್ನು ತಾಳಲಿದೆ ಎಂಬುದಾಗಿ ಹೆಚ್ಚಿನ ಸಮೀಕ್ಷೆಗಳು ತಿಳಿಸಿದ್ದವು.
ಏನೇ ಆದರೂ, ರಿವರ್ಸ್ ರೇಪೋ ದರ ಮತ್ತು ಬ್ಯಾಂಕ್ ದರದಲ್ಲಿ ಯಾವುದೇ ಬದಲಾವಣೆಯನ್ನು ಆರ್‌ಬಿಐ ಮಾಡಿಲ್ಲ.
|