ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ Search similar articles
ವ್ಯಾಪಾರ ಒಕ್ಕೂಟ ಮತ್ತು ನೌಕರರ ಒತ್ತಾಯದ ಮೇರೆಗೆ, ನಾಲ್ಕು ಕೋಟಿ ಗ್ರಾಹಕರಿಗೆ ಸೂಕ್ತ ಮರುಪಾವತಿ ಮಾಡುವ ನಿಟ್ಟಿನಲ್ಲಿ , 2,40,000 ಕೋಟಿ ರೂಪಾಯಿ ಮೂಲಧನವನ್ನು ನಿರ್ವಹಣೆ ಮಾಡಲು ಖಾಸಗಿ ಹಣಕಾಸು ಸಂಸ್ಥೆಗಳನ್ನು ಆಯ್ಕೆ ಮಾಡುವ ಕುರಿತಾಗಿ ನಿರ್ಣಯ ಕೈಗೊಳ್ಳಲು ಕಾರ್ಮಿಕರ ಭವಿಷ್ಯನಿಧಿ(ಇಪಿಎಫ್) ಮಂಡಳಿಯು ಮಂಗಳವಾರ ಸಭೆ ಸೇರಲಿದೆ.

ಈ ಮೂಲಧನವನ್ನು ನಿರ್ವಹಿಸಲು ಪ್ರಮುಖ ಹಣಕಾಸು ಸಂಸ್ಥೆಗಳಾದ ಎಚ್ಎಸ್‌ಬಿಸಿ, ಐಸಿಐಸಿಐ ಪ್ರುಡೆನ್ಶಿಯಲ್ ಮತ್ತು ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಆಯ್ದ ಪಟ್ಟಿಯಲ್ಲಿದ್ದು, ಇಂದು ನಡೆಯಲಿರುವ ಸಭೆಯು ನಿರ್ಧಾರ ಕೈಗೊಳ್ಳುವ ಮುಂಚಿತವಾಗಿ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುವ ನಿರೀಕ್ಷೆ ಇದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಉತ್ತಮ ಮರುಪಾವತಿಯನ್ನು ನೀಡುವಲ್ಲಿ ಖಾಸಗಿ ನಿರ್ವಾಹಕರು ಯಶಸ್ವಿಯಾದಲ್ಲಿ, ಹೆಚ್ಚುವರಿ ಮೂಲಧನಗಳ ನಿರ್ವಹಣೆಗೆ ಸೂಚನೆ ನೀಡಲಾಗುವುದು ಮತ್ತು ಇದಕ್ಕೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ಖಾಸಗಿ ಸಂಸ್ಥೆಗಳು ಆಯ್ದ ಪಟ್ಟಿಯ ಪ್ರಕ್ರಿಯಯಲ್ಲಿರುವುದರೊಂದಿಗೆ, ಸಿಬಿಟಿ ಮತ್ತು ಇಪಿಎಫ್ಒ ಈ ಮೊದಲು ಸಭೆ ಸೇರಿದ ಸಂದರ್ಭದಲ್ಲಿ ಬಡ್ಡಿದರ ಕುರಿತಾದ ನಿರ್ಧಾರವನ್ನು ಮುಂದೂಡಿತ್ತು.
ಮತ್ತಷ್ಟು
ಆರ್‌ಬಿಐನಿಂದ ರೇಪೋದರ ಹೆಚ್ಚಳ
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ?
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ
ಲಿಟಲ್ ವರ್ಲ್ಡ್ ಮಾಲ್‌ನಲ್ಲಿ ಆಡ್‌ಲ್ಯಾಬ್ ಸಿನೇಮಾ
ಕೆರೆಗಳ ಅಭಿವೃದ್ಧಿಗೆ ಕೇಂದ್ರ ಚಿಂತನೆ