ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ Search similar articles
ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ ಮತ್ತು ನಗದು ಮೀಸಲು ಪ್ರಮಾಣ ದರವನ್ನು ಏರಿಸಿರುವುದರೊಂದಿಗೆ, ಬ್ಯಾಂಕುಗಳ ಸಾಲ ಮತ್ತು ಠೇವಣಿ ದರಗಳಲ್ಲಿ ಶೇ.0.5ರಷ್ಟು ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಬ್ಯಾಂಕುಗಳು ಅಭಿಪ್ರಾಯಪಟ್ಟಿವೆ.

ನೈಜ ಪರಿಣಾಮದ ಬಗ್ಗೆ ವಿಮರ್ಷೆ ನಡೆಸಿ ಹಂತ ಹಂತವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು, ಸಾಲ ಮತ್ತು ಠೇವಣಿ ದರಗಳಲ್ಲಿ ಕನಿಷ್ಟ 0.5ರಷ್ಟು ಹೆಚ್ಚಳದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರಾಷ್ಟ್ರೀಕೃತ ಪಂಜಾಬ್ ರಾಷ್ಟ್ರೀಯ ಬ್ಯಾಂಕ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ.ಸಿ.ಚಕ್ರವರ್ತಿ ತಿಳಿಸಿದ್ದಾರೆ.

ಆರ್‌ಬಿಐಯ ಈ ನಿರ್ಧಾರದ ನಂತರ, ಬ್ಯಾಂಕಿನ ದ್ರವೀಕೃತ ಸ್ಥಿತಿಯ ಬಗ್ಗೆ ಬ್ಯಾಂಕ್‌ನ ಆಸ್ತಿ ಹೊಣೆ ಸಮಿತಿ(ಎಎಲ್‌ಸಿಒ)ಯು ಗಮನಹರಿಸಲಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಎಂ.ವಿ.ನಾಯರ್ ಹೇಳಿದ್ದಾರೆ.
ಮತ್ತಷ್ಟು
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ
ಆರ್‌ಬಿಐ ರೇಪೋದರದಲ್ಲಿ 50 ಅಂಶ ಹೆಚ್ಚಳ
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ?
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ
ಲಿಟಲ್ ವರ್ಲ್ಡ್ ಮಾಲ್‌ನಲ್ಲಿ ಆಡ್‌ಲ್ಯಾಬ್ ಸಿನೇಮಾ