ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ Search similar articles
ಜೂನ್ 2008ರ ಅವಧಿಯಲ್ಲಿ ಭಾರತವು ಸುಮಾರು 4.38 ದಶಲಕ್ಷ ಅಂತರ್ಜಾಲ ಬ್ರಾಡ್‌ಬ್ಯಾಂಡ್ ಬಳಕೆದಾರರನ್ನು ಹೊಂದಿದೆ ಎಂಬುದಾಗಿ ದೇಶದ ಟೆಲಿಕಾಂ ನಿಯಂತ್ರಣ ಸಂಸ್ಥೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ವರದಿಗಳು ತಿಳಿಸಿವೆ.

ಪ್ರತಿ ಸೆಕೆಂಡಿಗೆ 256 ಕಿಲೋಬೈಟ್ ವೇಗದಲ್ಲಿ ಡೌನ್‌ಲೋಡ್ ಮಾಡುವ ಅಂತರ್ಜಾಲ ಬಳಕೆದಾರರ ಸಂಖ್ಯೆಯು 4.38 ದಶಲಕ್ಷಕ್ಕೆ ಏರಿದ್ದು, ಮೇ ತಿಂಗಳಲ್ಲಿ ಇದರ ಪ್ರಮಾಣವು 4.15 ದಶಲಕ್ಷದಷ್ಟಿತ್ತು ಎಂದು ಈ ವರದಿಗಳು ಹೇಳಿವೆ.

ಏಪ್ರಿಲ್ 2007ರಿಂದ ಜೂನ್ 2008ರ ಅವಧಿಯಲ್ಲಿ ದೇಶದ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯು ಭಾಗಶಃ ದ್ವಿಗುಣಗೊಂಡಿದೆ ಎಂದು ಟ್ರಾಯ್ ಹೇಳಿಕೆಗಳು ದೃಢಪಡಿಸಿವೆ.

ಜೂನ್ ತಿಂಗಳ ಅವಧಿಯಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆಯು 253 ದಶಲಕ್ಷಕ್ಕೆ ತಲುಪುವ ಮೂಲಕ ಚೀನಾವು ಸೈಬರ್ ಕೇಂದ್ರವಾಗಿ ಹೊರಹೊಮ್ಮಿದೆ ಎಂಬುದಾಗಿ ಕೆಲವು ದಿನಗಳ ಹಿಂದೆ ಚೀನಾ ಅಂತರ್ಜಾಲ ನೆಟ್ವರ್ಕ್ ಮಾಹಿತಿ ಕೇಂದ್ರ(ಸಿಐಎನ್ಐಸಿ)ದ ವರದಿಗಳು ಹೇಳಿದ್ದವು.
ಮತ್ತಷ್ಟು
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ
ಆರ್‌ಬಿಐ ರೇಪೋದರದಲ್ಲಿ 50 ಅಂಶ ಹೆಚ್ಚಳ
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ?
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ