ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನಪ್ರಿಯಗೊಳ್ಳುತ್ತಿರುವ ರಿಟೈಲ್ ಆಹಾರೋದ್ಯಮ Search similar articles
ಸದೃಢ ಆದಾಯ ಹಾಗೂ ವಿವಿಧ ಆದಾಯ ಮೂಲಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಕುಟುಂಬಗಳು ಜೀವನಶೈಲಿ ನಿರ್ವಹಣೆಯಲ್ಲಿ ನಾಟಕೀಯ ಬದಲಾವಣೆಯ ಮೂಲಕ ಭಾರತೀಯರು ಮುಂದೆ ಸಾಗುತ್ತಿದ್ದಾರೆ.

ನಗರೀಕರಣ ಮತ್ತು ಜನಸಂಖ್ಯಾ ವಿಜ್ಞಾನದ ವಿಧಾನಗಳು ಜೀವನಶೈಲಿಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜೀವಶೈಲಿ ವೃದ್ಧಿಸಿದಂತೆ, ಉತ್ತಮ ಗುಣಮಟ್ಟದ ಆಹಾರ ಉತ್ಪನ್ನ, ವೈವಿಧ್ಯ ರುಚಿ ಮುಂತಾದವುಗಳತ್ತ ಹೆಚ್ಚು ಗಮನಹರಿಸಲಾಗುತ್ತಿದೆ.

ಹೆಚ್ಚುತ್ತಿರುವ ಆಹಾರ ಉತ್ಪನ್ನಗಳ ಗುಣಮಟ್ಟದ ರುಚಿ ವೈವಿಧ್ಯತೆಯ ಬೇಡಿಕೆಯನ್ನು ಆಧುನಿಕ ರಖಂ ಉದ್ಯಮವು ಪೂರೈಸುತ್ತಿದ್ದು, ಇದರೊಂದಿಗೆ, ಚಿಲ್ಲರೆ ಉದ್ಯಮದಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಳಗೊಳ್ಳುತ್ತಿದೆ.

ಹಣದುಬ್ಬರವು 13 ವರ್ಷಗಳಲ್ಲೇ ಅಧಿಕ ಮಟ್ಟಕ್ಕೇರಿರುವುದರೊಂದಿಗೆ, ಹೆಚ್ಚಿನ ವ್ಯಾಪಾರಿಗಳು ಕಿರಾಣಿ ಅಂಗಡಿಗಳ ರಖಂನತ್ತ ಒಲವು ತೋರತೊಡಗಿದ್ದಾರೆ. ಏನೇ ಆದರೂ, ಬೆಲೆಯನ್ನು ಸ್ಥಿರವಾಗಿಸುವ ಅವರ ಪ್ರಯತ್ನದೊಂದಿಗೆ, ತರಕಾರಿ, ಖಾದ್ಯತೈಲ ಮುಂತಾದವುಗಳ ಬೆಲೆಯು ಅತಿ ಹೆಚ್ಚಾಗಿರುವುದರಿಂದ, ಸೂಕ್ಷ್ಮ ಅಂತರದಲ್ಲಿ ಬೆಲೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತಿದ್ದಾರೆ.

ಆದ್ದರಿಂದ ಇಂದಿನ ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳುವುದು ಖಾಯಂ ಮಾಡಿಕೊಳ್ಳುವುದು ಅತ್ಯಂತ ಕಷ್ಟವೇ ಆಗಿದೆ. ಉಳಿದ ಗ್ರಾಹಕರಿಗಿಂತ ಖಾಯಂ ಗ್ರಾಹಕರು ಹೆಚ್ಚೇ ವ್ಯಾಪಾರ ಮಾಡುತ್ತಾರೆ ಎಂಬುದು ವಾಸ್ತವವಾಗಿದೆ.

ಸ್ಪರ್ಧೆಯು ಹೆಚ್ಚಾಗುತ್ತಿರುವುದರೊಂದಿಗೆ, ಹೆಚ್ಚಿನ ರಖಂ ವ್ಯಾಪಾರಿಗಳು ಲಾಯಲ್ಟಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಉದಾಹರಣೆಗೆ ರಿಲಾಯನ್ಸ್ ಕಾರ್ಡ್ , ಸುಭಿಕ್ಷಾ ಕಾರ್ಡ್. ಇಂತಹ ಕಾರ್ಡುಗಳು ಉಚಿತವಾಗಿ ಉತ್ಪನ್ನಗಳನ್ನು ನೀಡುತ್ತದೆ.

ಇಂತಹ ಕಾರ್ಡ್‌ಗಳನ್ನು ಗ್ರಾಹಕರಿಗೆ ಒದಗಿಸಲು ಐಸಿಐಸಿಐ ಕೆಲವು ಚಿಲ್ಲರೆ ವ್ಯಾಪಾರ ಸಂಸ್ಥೆಗಳೊಂದಿಗೆ ಪಾಲುದಾರರಾಗಿದೆ. ಈ ಕಾರ್ಡುಗಳಿಂದ ಲಾಯಲ್ಟಿ ಅಂಶಗಳನ್ನು ಪಡೆದುಕೊಳ್ಳುವುದರೊಂದಿಗೆ, ಗ್ರಾಹಕರು ವಿಶೇಷ ಕಡಿತ ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ.

ಏನೇ ಆದರೂ, ಲಾಯಲ್ಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಲು ಹೆಚ್ಚಿನ ಪ್ರಮಾಣದ ಬಂಡವಾಳ ಅಗತ್ಯ. ಇದು ಕೇವಲ ತಂತ್ರಜ್ಞಾನದಷ್ಟೇ ಅಲ್ಲ, ಮೂಲಸೌಕರ್ಯದಲ್ಲೂ ಬಂಡವಾಳದ ಅಗತ್ಯವಿದೆ. ಆದರೆ, ಹೆಚ್ಚಿನ ಮಾರುಕಟ್ಟೆ ಪ್ರಯತ್ನಗಳು ಗ್ರಾಹಕರ ಖರೀದಿ ಪ್ರವೃತ್ತಿಯಮನ್ನು ಅವಲಂಬಿಸಿರುತ್ತದೆ. ಲಾಯಲ್ಟಿ ಕಾರ್ಯಕ್ರಮಗಳು ಪಕ್ವವಾಗಿದ್ದಲ್ಲಿ, ಆದಾಯದ ಮೇಲೆ ಶೇ.1ರಿಂದ 1.5ರಷ್ಟು ವೆಚ್ಚಮಾಡುತ್ತಾರೆ.

ಇತರ ವಿಧಾನಗಳಲ್ಲಿ ಶೇ.2ರಿಂದ 5ರಷ್ಟು ವೆಚ್ಚ ಮಾಡುತ್ತಾರೆ. ನಿರ್ದಿಷ್ಟವಾಗಿ ಯಾವುದೇ ಕಾರ್ಯಕ್ರಮಗಳು ತ್ವರಿತ ಫಲಿತಾಂಶವನ್ನು ನೀಡುವುದಿಲ್ಲ. ಲಾಯಲ್ಟಿ ಕಾರ್ಯಕ್ರಮದ ಫಲಿತಾಂಶ ಸಿಗಲು ಕನಿಷ್ಟ ಪಕ್ಷ 18 ತಿಂಗಳ ಅಗತ್ಯವಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದಿಂದ ತಾಳ್ಮೆಯು ಇಲ್ಲಿ ಅತಿ ಮುಖ್ಯ.

ಗ್ರಾಹಕರ ಕೊರತೆಯನ್ನು ಕಡಿಮೆಗೊಳಿಸುವುದರಿಂದ ಸರಾಸರಿ ಅಭಿವೃದ್ಧಿಯು ದ್ವಿಗುಣಗೊಳ್ಳುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಇನ್ನೊಂದಂಶದಲ್ಲಿ, ಗ್ರಾಹಕರ ಸಾಮರ್ಥ್ಯದಲ್ಲಿ ಶೇ.5ರಷ್ಟು ಬದಲಾವಣೆಯಿದ್ದರೆ, ಆದಾಯವು ಶೇ.25ರಷ್ಟು ಹೆಚ್ಚಾಗುತ್ತದೆ. ಗ್ರಾಹಕರ ವಿಶ್ವಾಸ ಗಳಿಕೆಯು ಆದಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಲೇಖನ: ವಿಜಯ್ ಬೊಬ್ಬಾ
ಸ್ಥಾಪಕ ಸಿಇಒ,ಲಾಯಲ್ಟಿ ಸೊಲ್ಯೂಶನ್ಸ್ ಎಂಡ್ ರಿಸರ್ಚ್ ಲಿ.
ಮತ್ತಷ್ಟು
ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ
ಆರ್‌ಬಿಐ ರೇಪೋದರದಲ್ಲಿ 50 ಅಂಶ ಹೆಚ್ಚಳ
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ?
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ